ಕರ್ನಾಟಕ ಸರ್ಕಾರದಿಂದ ಸಾಮೂಹಿಕ ವಿವಾಹಕ್ಕೆ ಮುಹೂರ್ತ ಘೋಷಣೆ – ವಧು-ವರರಿಗೆ ಸರ್ಕಾರದಿಂದ ಏನೆಲ್ಲಾ ಸವಲತ್ತು ಸಿಗುತ್ತೆ ಗೊತ್ತಾ..?

ರಾಜ್ಯ ಸರ್ಕಾರ ಪ್ರಾಯೋಜಿತ ಸಾಮೂಹಿಕ ಉಚಿತ ವಿವಾಹ ಕಾರ್ಯಕ್ರಮಕ್ಕೆ ಸಪ್ತಪದಿ ಎಂದು ಹೆಸರಿಡಲಾಗಿದ್ದು, ಸಾಮೂಹಿಕ ವಿವಾಹಕ್ಕೆ ಮುಹೂರ್ತ ನಿಗದಿ ಆಗಿದೆ. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ 100 ಎ ವರ್ಗದ ದೇವಸ್ಥಾನಗಳಲ್ಲಿ ಮದುವೆ ನಡೆಯಲಿದೆ. ಏಪ್ರಿಲ್‌ 26ಮತ್ತು ಮೇ ತಿಂಗಳಲ್ಲಿ 24ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ.

ಏಪ್ರಿಲ್‌ನಲ್ಲಿ ನಡೆಯುವ ಮೊದಲ ಹಂತದ ಸಾಮೂಹಿಕ ಮದುವೆಗೆ ವಧುವರರು ಹೆಸರು ನೋಂದಾಯಿಸಿಕೊಳ್ಳಲು ಮಾರ್ಚ್‌ 27 ಕಡೆಯ ದಿನವಾಗಿದ್ದು, ಮೇನಲ್ಲಿ ನಡೆಯುವ ವಿವಾಹ ಮಹೋತ್ಸವಕ್ಕೆ ಏಪ್ರಿಲ್‌ 24ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಮುಂಚಿತವಾಗಿಯೇ ಸಂಬಂಧಪಟ್ಟ ಮುಜರಾಯಿ ಇಲಾಖೆ ದೇವಸ್ಥಾನದಿಂದ ಅರ್ಜಿಗಳನ್ನು ಪಡೆದುಕೊಳ್ಳಬೇಕು. ವಧು-ವರರ ಸಹಾಯಕ್ಕಾಗಿ ಸರ್ಕಾರ 1800 4256654 ಸಂಖ್ಯೆಯ ಸಹಾಯವಾಣಿಯನ್ನೂ ಆರಂಭಿಸಿದೆ.

ವರನಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು:

ಪಂಚೆ, ಹೂವಿನ ಹಾರ, ಶಲ್ಯಕ್ಕಾಗಿ ಸರ್ಕಾರವೇ 5 ಸಾವಿರ ರೂಪಾಯಿ ನೀಡಲಿದೆ.

ವಧುವಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳು:

ಹೂವಿನ ಹಾರ, ಧಾರೆ ಸೀರೆ, ರವಿಕೆ ಖರೀದಿಗಾಗಿ 10 ಸಾವಿರ ರೂಪಾಯಿ.

ವಧುವಿಗೆ ಚಿನ್ನದ ತಾಳಿ, ಎರಡು ಚಿನ್ನದ ಗುಂಡು (ಅಂದಾಜು 8 ಗ್ರಾಂ ತೂಕ, ಮೊತ್ತ 40 ಸಾವಿರ ರೂ. )

ಈ ಹಣವನ್ನು ಸಂಬಂಧಪಟ್ಟ ಮುಜರಾಯಿ ಇಲಾಖೆಯ ದೇವಸ್ಥಾನದಿಂದಲೇ ವಧು-ವರರಿಗೆ ವಿತರಿಸಲಾಗುತ್ತದೆ.

ಸಾಮೂಹಿಕ ವಿವಾಹಕ್ಕೆ ಆಗಮಿಸುವ ವಧು-ವರರು ಮತ್ತವರ ಸಂಬಂಧಿಕರು ಮತ್ತು ಸಾರ್ವಜನಿಕರಿಗೆ ದೇವಸ್ಥಾನದ ವತಿಯಿಂದಲೇ ಉಚಿತ ಊಟೋಪಾಚಾರಗಳನ್ನು ವ್ಯವಸ್ಥೆ ಮಾಡಲಾಗುತ್ತದೆ.

ಸಪ್ತಪದಿ ಕಾರ್ಯಕ್ರಮದ ರಾಯಭಾರಿಗಳಾಗಿ ಇನ್ ಫೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಮತ್ತು ನಟ ಯಶ್ ಸರಕಾರದ ಜತೆ ಕೈ ಜೋಡಿಸಲಿದ್ದಾರೆ.

LEAVE A REPLY

Please enter your comment!
Please enter your name here