ಕರ್ನಾಟಕದ ಈ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆಗೆಯಬಹುದು..!

ಏಪ್ರಿಲ್‌ ೧೪ರಂದು ಲಾಕ್‌ಡೌನ್‌ ಕೊನೆ ಆದ ಬಳಿಕ ಕರ್ನಾಟಕದಲ್ಲಿ ಲಾಕ್‌ಡೌನ್‌ನಿಂದ ಕೆಲವೊಂದು ವಿನಾಯಿತಿಗಳು ಸಿಗುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಜಿಲ್ಲೆಗಳನ್ನು ಕೊರೋನಾ ಹಾಟ್‌ಸ್ಪಾಟ್‌ ಜಿಲ್ಲೆಗಳೆಂದು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಇದಾದ ಜೊತೆಗೆ ಮಂಡ್ಯ, ಕಲ್ಬುರ್ಗಿ, ಬಾಗಲಕೋಟೆ, ಬೆಂಗಳೂರು ಗ್ರಾಮಾಂತರ, ಉಡುಪಿ, ಗದಗದಲ್ಲೂ ಕೊರೋನಾ ಪಾಸಿಟಿವ್‌ ಪ್ರಕರಣ ವರದಿ ಆಗಿದೆ.

ರಾಜ್ಯದ ೩೦ ಜಿಲ್ಲೆಗಳಲ್ಲಿ ೧೨ ಜಿಲ್ಲೆಗಳಷ್ಟೇ ಕೊರೋನಾ ಮುಕ್ತವಾಗಿವೆ.

ಕೊರೋನಾ ಪಾಸಿಟಿವ್‌ ಪ್ರಕರಣದ ವರದಿ ಆಗದ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆಗೆಯುವ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಲವು ವ್ಯಕ್ತಪಡಿಸಿದ್ದಾರೆ.

ಒಂದುವೇಳೆ ಪ್ರಧಾನಿಯವರು ನನ್ನ ಅಭಿಪ್ರಾಯವನ್ನು ಕೇಳಿದ್ದಾರೆ ಆಗ ನಾನು ಕೊರೋನಾ ವರದಿ ಆಗದ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ತೆಗೆಯುವುದರ ಪರ ನಾನಿದ್ದೇನೆ. ಆಗ ಆ ಜಿಲ್ಲೆಯ ಜನರು ತಮ್ಮ ಜಿಲ್ಲೆಯೊಳಗೆ ಓಡಾಡಬಹುದು ಮತ್ತು ಆದರೆ ಬೇರೆ ಜಿಲ್ಲೆಗಳಿಗೆ ಹೋಗುವಂತಿಲ್ಲ. ಕೊರೋನಾ ಮುಕ್ತರಾದ ಜಿಲ್ಲೆಗಳಲ್ಲಿ ವ್ಯವಹಾರ ಎಂದಿನಂತೆ ನಡೆಯಲಿದೆ

ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

LEAVE A REPLY

Please enter your comment!
Please enter your name here