ಕರ್ನಾಟಕದಲ್ಲಿ ಮೇ 3 ರವರೆಗೆ ಲಾಕ್ ಡೌನ್‌ ಮುಂದುವರಿಕೆ

ಕೊರೋನಾ ತಡೆಗಾಗಿ ಸದ್ಯ ಭಾರತದಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದು, ಲಾಕ್‌ಡೌನ್‌ನಿಂದ ಕೇಂದ್ರ ಸರ್ಕಾರ ನೀಡಿರುವ ಕೆಲವೊಂದಿಷ್ಟು ಸಡಿಲಿಕೆಗಳು ಇವತ್ತಿನಿಂದ ಅನ್ವಯ ಆಗಲಿವೆ ಎಂದು ನಿನ್ನೆ ಕೇಳಿಬಂದಿತ್ತು.

ಆದರೆ ಇಂದು ನಡೆದ ಸಂಪುಟ ಸಭೆಯಲ್ಲಿ ರಾಜ್ಯದಲ್ಲಿ ಲಾಕ್‌ ಡೌನ್‌ ಅನ್ನು ಮೇ 3 ರವರೆಗೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಐಟಿ, ಬಿಟಿ, ಗ್ರಾಮಾಂತರ ಪ್ರದೇಶಗಳಲ್ಲಿ ಯಾವುದೇ ನಿರ್ಬಂಧ ಸಡಿಲಿಕೆ ಮಾಡದಿರಲು ನಿರ್ಧರಿಸಲಾಗಿದೆ. ಹಾಗೆಯೇ ಕೊರೋನಾ ವಾರಿಯರ್ಸ್ ಕಾರ್ಯಾಚರಣೆಗೆ ಅಡ್ಡಿಪಡಿಸುವವರಿಗೆ ಮತ್ತು ಉದ್ದೇಶಪೂರ್ವಕವಾಗಿ ಸೋಂಕು ಹರಡುವವರ ವಿರುದ್ಧ ಗೂಂಡಾ ಕಾಯ್ದೆ ಪ್ರಯೋಗಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here