ಕರ್ನಾಟಕದಲ್ಲಿ ಈ ಜಿಲ್ಲೆಗಳಿಗಷ್ಟೇ ಲಾಕ್‌ಡೌನ್‌ ವಿನಾಯ್ತಿ ಸಿಗಬಹುದು..! – ಮೂರೇ ದಿನ ಬಾಕಿ

ಒಂದ್ಕಡೆ ಕರ್ನಾಟಕದಲ್ಲಿ ಕೊರೋನಾ ಕೇಸ್‌ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದ್ದು ರಾಜ್ಯದ ಆರೋಗ್ಯ ಇಲಾಖೆಯು ಕೊರೋನಾ ಸಂಖ್ಯೆಗಳನ್ನು ಆಧರಿಸಿ ಜಿಲ್ಲೆಗಳನ್ನು ಕೆಂಪು, ಹಳದಿ ಮತ್ತು ಹಸಿರು ವಲಯಗಳನ್ನಾಗಿ ವಿಂಗಡಿಸಿದೆ. ಈ ವಿಂಗಡಣೆಯ ಪ್ರಕಾರ ಯಾವ ಜಿಲ್ಲೆಗಳಿಗೆ ಏಪ್ರಿಲ್‌ 20ರ ಬಳಿಕ ಲಾಕ್‌ಡೌನ್‌ನಿಂದ ವಿನಾಯಿತಿ ಸಿಗಲಿದೆ ಎಂಬುದು ದೃಢವಾಗಲಿದೆ.

ಕೊರೋನಾ ಹಾಟ್‌ಸ್ಪಾಟ್‌ ಜಿಲ್ಲೆಗಳು:

1) ಬೆಂಗಳೂರು ನಗರ : ಒಟ್ಟು ಕೊರೋನಾ ಪಾಸಿಟಿವ್‌ ಕೇಸ್‌ 86 – ಇವತ್ತು ವರದಿ ಆದ ಹೊಸ ಕೇಸ್‌ಗಳ ಸಂಖ್ಯೆ – 09

2) ಬೆಂಗಳೂರು ಗ್ರಾಮಾಂತರ : ಒಟ್ಟು ಕೊರೋನಾ ಪಾಸಿಟಿವ್‌ ಕೇಸ್‌  12 – ಇವತ್ತು ಕೊರೋನಾ ಕೇಸ್‌ ವರದಿ ಆಗಿಲ್ಲ

3) ಮೈಸೂರು : ಒಟ್ಟು ಕೊರೋನಾ ಕೇಸ್‌ನ ಸಂಖ್ಯೆ 73 – ಇವತ್ತು ಮತ್ತೆ 12 ಕೊರೋನಾ ಪಾಸಿಟಿವ್‌ ಕೇಸ್‌ ವರದಿ

4) ಮಂಡ್ಯ : ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 11 – ಇವತ್ತು ವರದಿ ಆದ ಕೊರೋನಾ ಕೇಸ್‌ಗಳ ಸಂಖ್ಯೆ 03

5) ಬೆಳಗಾವಿ : ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 41 – ಇವತ್ತು ವರದಿ ಆದ ಕೊರೋನಾ ಕೇಸ್‌ 05

6) ಬಾಗಲಕೋಟೆ : ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 14 – ಇವತ್ತು ಕೊರೋನಾ ಕೇಸ್‌ ವರದಿ ಆಗಿಲ್ಲ

7) ಬಳ್ಳಾರಿ : ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 13 – ಇವತ್ತು ವರದಿ ಆದ ಕೊರೋನಾ ಕೇಸ್‌ಗಳ ಸಂಖ್ಯೆ -07

8) ಬೀದರ್‌: ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 14 – ಇವತ್ತು ವರದಿ ಆದ ಕೊರೋನಾ ಪಾಸಿಟಿವ್‌ ಕೇಸ್‌ 01

9) ಚಿಕ್ಕಬಳ್ಳಾಪುರ : ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 16 – ಇವತ್ತು ವರದಿ ಆದ ಪಾಸಿಟಿವ್‌ ಕೇಸ್‌ 03

10) ದಕ್ಷಿಣ ಕನ್ನಡ : ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ  12 – ಇವತ್ತು ವರದಿ ಆದ ಕೊರೋನಾ ಪಾಸಿಟಿವ್‌ ಕೇಸ್‌ 01

11) ಕಲ್ಬುರ್ಗಿ – ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 20 – ಇವತ್ತು ವರದಿ ಆದ ಕೇಸ್‌ಗಳ ಸಂಖ್ಯೆ – 01

12) ವಿಜಯಪುರ – ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 19 – ಇವತ್ತು ವರದಿ ಆದ ಕೊರೋನಾ ಕೇಸ್‌ -02

13) ಉತ್ತರ ಕನ್ನಡ – ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 11 – ಇವತ್ತು ವರದಿ ಆದ ಕೊರೋನಾ ಕೇಸ್‌ – 00

ಹಳದಿ ವಲಯದ ಜಿಲ್ಲೆಗಳು: ಕೊರೋನಾ ಹಾಟ್‌ಸ್ಪಾಟ್‌ ಅಲ್ಲದ ಜಿಲ್ಲೆಗಳು

1) ಧಾರವಾಡ – ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 06

2) ಗದಗ – ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 02

3) ಕೊಡಗು – ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 01

4) ಉಡುಪಿ – ಒಟ್ಟು ಕೊರೋನಾ ಕೇಸ್‌ಗಳ ಸಂಖ್ಯೆ 01

ಕೊರೋನಾ ಮಾಹಾಮಾರಿ ವಕ್ಕರಿಸದ ಜಿಲ್ಲೆಗಳು:

1) ಚಾಮರಾಜನಗರ, 2) ಚಿಕ್ಕಮಗಳೂರು 3) ಚಿತ್ರದುರ್ಗ 4) ಹಾಸನ 5) ಹಾವೇರಿ 6) ಕೋಲಾರ 7) ಕೊಪ್ಪಳ 8) ರಾಯಚೂರು 9) ರಾಮನಗರ 10) ಶಿವಮೊಗ್ಗ 11) ತುಮಕೂರು 12) ಯಾದಗಿರಿ 13) ದಾವಣಗೆರೆ

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೊರೋನಾ ಹಾಟ್‌ಸ್ಪಾಟ್‌ ಅಲ್ಲದ ಕಡೆಗಳು ಮತ್ತು ಕೊರೋನಾ ಇಲ್ಲದ ಜಿಲ್ಲೆಗಳಲ್ಲಿ ವಿನಾಯ್ತಿಯನ್ನು ನೀಡಲಾಗಿದೆ. ಅದೂ ಏಪ್ರಿಲ್‌ ೨೦ರ ಬಳಿಕ ಅಂದರೆ ಮಂಗಳವಾರದ ಬಳಿಕ. ಹೀಗಾಗಿ ಹಳದಿ ಮತ್ತು ಹಸಿರು ವಲಯದಲ್ಲಿರುವ ಜಿಲ್ಲೆಗಳಿಗೆ ಮಂಗಳವಾರದವರೆಗೆ ನಿರ್ಣಾಯಕ. ಒಂದು ವೇಳೆ ಈ ಜಿಲ್ಲೆಗಳು ಹಾಟ್‌ಸ್ಪಾಟ್‌ಗಳಾಗಿ ಬದಲಾದರೆ ಆಗ ಲಾಕ್‌ಡೌನ್‌ ವಿನಾಯ್ತಿ ವಾಪಸ್‌ ಆಗಲಿದೆ ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ.

LEAVE A REPLY

Please enter your comment!
Please enter your name here