ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಘಾತ – 9 ಸಾವಿರ ಕೋಟಿ ತೆರಿಗೆ ಪಾಲು ಕಡಿತ..!

ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಬರಬೇಕಿದ್ದ ತೆರಿಗೆ ಪಾಲಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬರೋಬ್ಬರೀ 9,000 ಸಾವಿರ ಕೋಟಿ ರೂಪಾಯಿಯಷ್ಟು ಕಡಿತಗೊಳಿಸಿದೆ. ಈ ಕಡಿತದ ಮೊತ್ತ 11,000 ಸಾವಿರ ಕೋಟಿ ರೂಪಾಯಿ ಆಗಬಹುದು ಎಂದು ಊಹಿಸಲಾಗಿದೆ.

ಪ್ರವಾಹ ಪರಿಹಾರಕ್ಕೆ ಕೇಂದ್ರ ಸರ್ಕಾರದಿಂದ ಅಗತ್ಯ ಪರಿಹಾರವೇ ಸಿಕ್ಕಿಲ್ಲ. ಜಿಎಸ್‌ಟಿ ತೆರಿಗೆಯಲ್ಲಿ ರಾಜ್ಯ ಸರ್ಕಾರಕ್ಕೆ ಮೋದಿ ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿದೆ. ನರೇಗಾ ಯೋಜನೆಯಲ್ಲೂ ಈ ಹಣಕಾಸು ವರ್ಷದ ಹಣ ಬಂದಿಲ್ಲ. ಇವೆಲ್ಲದರ ನಡುವೆಯೇ ಮೋದಿ ಆಡಳಿತ ಕರ್ನಾಟಕ್ಕೆ ಆಘಾತ ನೀಡಿದೆ.

ಕೇಂದ್ರ ತೆರಿಗೆಯಲ್ಲಿ ರಾಜ್ಯಗಳಿಗೂ ಪಾಲಿದೆ. 14ನೇ ಹಣಕಾಸು ಆಯೋಗದ ವರದಿ ಪ್ರಕಾರದ ಕೇಂದ್ರ ಸರ್ಕಾರದ ತೆರಿಗೆಯಲ್ಲಿ ರಾಜ್ಯಗಳಿಗೆ ಶೇಕಡಾ 42ರಷ್ಟು ತೆರಿಗೆ ಹಂಚಿಕೆ ಆಗಿತ್ತು. ಆದರೆ ಲೋಕಸಭೆಯಲ್ಲಿ ಶನಿವಾರ ಮಂಡನೆ ಆದ 15ನೇ ಹಣಕಾಸು ಆಯೋಗದ ವರದಿ ಪ್ರಕಾರ ಶೇಕಡಾ 41ರಷ್ಟು ತೆರಿಗೆ ಸಿಗಲಿದೆ.

ಅಂದಹಾಗೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ತನ್ನ ತೆರಿಗೆ ಪಾಲಲ್ಲಿ ಕಡಿತ ಮಾಡುತ್ತಿರುವುದು ಇದೇ ಮೊದಲಲ್ಲ. 2019 ಅಂದರೆ ಲೋಕಸಭಾ ಚುನಾವಣೆಗೂ ಎರಡು ತಿಂಗಳು ಮೊದಲು ಫೆಬ್ರವರಿಯಲ್ಲಿ ಮಂಡನೆ ಆಗಿದ್ದ ಕೇಂದ್ರ ಬಜೆಟ್‌ನಲ್ಲಿ ನಮ್ಮ ರಾಜ್ಯಕ್ಕೆ 39,806 ಕೋಟಿ ರೂಪಾಯಿ ತೆರಿಗೆ ಪಾಲು ಎಂದು ಘೋಷಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಚುನಾವಣೆ ಆದ ಬಳಿಕ (ಕರ್ನಾಟಕದಿಂದ 25 ಬಿಜೆಪಿ ಸಂಸದರು ಆಯ್ಕೆ ಆಗಿದ್ದಾರೆ) ಜುಲೈನಲ್ಲಿ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್‌ನಲ್ಲಿ  1,672 ಕೋಟಿ ರೂಪಾಯಿ ಕಡಿತಗೊಳಿಸಿ 38,134 ಕೋಟಿ ರೂಪಾಯಿಗೆ ಇಳಿಸಲಾಯಿತು.

LEAVE A REPLY

Please enter your comment!
Please enter your name here