ಕರ್ನಾಟಕದಲ್ಲೂ ಕೇರಳ ಮಾದರಿ ಲಾಕ್‌ಡೌನ್‌ ವಿನಾಯ್ತಿ ಸಿಗುತ್ತಾ..? – ಬಸ್‌ಗಳು ಓಡಾಡ್ತಾವಾ..?

ಕರ್ನಾಟಕದಲ್ಲಿ ಕೇರಳ ಮಾದರಿಯಲ್ಲೇ ಲಾಕ್‌ಡೌನ್‌ನಿಂದ ವಿನಾಯ್ತಿ ಸಿಗುತ್ತಾ..? ಸದ್ಯ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಕರ್ನಾಟಕದಲ್ಲಿ ವಿನಾಯ್ತಿ ಘೋಷಿಸಲಾಗಿದೆ. ಆದರೆ ಲಾಕ್‌ಡೌನ್‌ ವಿನಾಯ್ತಿ ವಿಷಯದಲ್ಲಿ ಕೇರಳ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ.

ದೇಶದಲ್ಲಿ ಮೊದಲ ಕೊರೋನಾ ಪ್ರಕರಣ ವರದಿ ಆಗಿದ್ದು ಕೇರಳದಲ್ಲಿ. ಮೊದಲ ಬಾರಿಗೆ ಲಾಕ್‌ಡೌನ್‌ ಸೂತ್ರ ಅನುಸರಿಸಿದ್ದೇ ಕೇರಳ. ಈಗಲೂ ಲಾಕ್‌ಡೌನ್‌ ವಿನಾಯ್ತಿಯಲ್ಲೂ ತನ್ನದೇ ಮಾದರಿಯನ್ನು ಕೈಗೊಂಡಿದೆ. ಕೇಂದ್ರ ಮಾರ್ಗಸೂಚಿಯಂತೆ ವ್ಯಾಪ್ತಿಯಲ್ಲೇ ಕೆಲವೊಂದಿಷ್ಟು ರಿಲೀಫ್‌ ಘೋಷಿಸಿದೆ.

ಕೊರೋನಾ ಕೇಸ್‌ ಆಧರಿಸಿ ಕೇರಳದಲ್ಲಿ ಜಿಲ್ಲೆಗಳನ್ನು ಮೂರರ ಬದಲಾಗಿ ನಾಲ್ಕು ವಲಯಗಳಾಗಿ ವಿಂಗಡಿಸಲಾಗಿದೆ. 1) ಕೆಂಪು ವಲಯ 2) ಕಿತ್ತಳೆ (A) ವಲಯ 3) ಕಿತ್ತಳೆ (B) ವಲಯ 4) ಹಸಿರು ವಲಯ

ಕೆಂಪು ವಲಯ: ಕಾಸರಗೋಡು, ಕಣ್ಣೂರು, ಕೊಯಿಕ್ಕೋಡ್‌ ಮತ್ತು ಮಲಪ್ಪುರಂ. ಈ ನಾಲ್ಕು ಜಿಲ್ಲೆಗಳಲ್ಲಿ ಮೇ 3ರವರೆಗೆ ಲಾಕ್‌ಡೌನ್‌ ಬಿಗಿ ಆಗಿರಲಿದೆ. ಕೇವಲ ಅವಶ್ಯಕ ಸಾಮಗ್ರಿಗಳ ವಾಹನಗಳ ಓಡಾಟಕ್ಕಷ್ಟೇ ಅವಕಾಶ ಇರುತ್ತದೆ.

ಆರೆಂಜ್‌ A ವಲಯ : ಈ ವಲಯದಲ್ಲಿ ಬರುವ ಜಿಲ್ಲೆಗಳು ಪತನಂತಿಟ್ಟಂ, ಎರ್ನಾಕುಲಂ ಮತ್ತು ಕೊಲ್ಲಂ. ಏಪ್ರಿಲ್‌ ೨೪ರವರೆಗೆ ಲಾಕ್‌ಡೌನ್‌ ಈ ಜಿಲ್ಲೆಗಳಲ್ಲಿ ಮುಂದುವರಿಯಲಿದ್ದು, ಏಪ್ರಿಲ್‌ 24ರ ಲಾಕ್‌ಡೌನ್‌ನಿಂದ ಕೊಂಚ ವಿನಾಯ್ತಿಯನ್ನು ನೀಡಲಾಗುತ್ತದೆ.

ಆರೆಂಜ್‌ B ವಲಯ: ಅಲಪ್ಪುಜ, ತ್ರಿಶೂರ್‌, ಪಾಲಕ್ಕಾಡ್‌, ತಿರುವಂನತಪುರಂ ಮತ್ತು ವಯನಾಡ್‌. ಏಪ್ರಿಲ್‌ 20ರ ಬಳಿಕ ಈ ಜಿಲ್ಲೆಗಳಲ್ಲಿ ಲಾಕ್‌ಡೌನ್‌ನಿಂದ ಭಾಗಶಃ ವಿನಾಯ್ತಿ ಸಿಗಲಿದೆ.

ಹಸಿರು ವಲಯ: ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳು. ಏಪ್ರಿಲ್‌ 20ರ ಬಳಿಕ ಈ ಜಿಲ್ಲೆಗಳಲ್ಲಿ ಲಾಕ್‌ಡೌನ್‌ಗೆ ವಿನಾಯ್ತಿ ಸಿಗಲಿದೆ.

ಲಾಕ್‌ಡೌನ್‌ ವಿನಾಯ್ತಿ ಘೋಷಿಸಿರುವ ಜಿಲ್ಲೆಗಳಲ್ಲಿ ಈ ಎಲ್ಲಾ ಸೇವೆಗಳು ಲಭ್ಯವಿರಲಿವೆ:

ವಾಹನಗಳ ಓಡಾಟ:

ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಬೆಸಸಂಖ್ಯೆಯೊಂದಿಗೆ ಕೊನೆಯಾಗುವ ವಾಹನಗಳ ಓಡಾಟಕ್ಕೆ ಅವಕಾಶ ಇರಲಿದೆ.

ಮಂಗಳವಾರ, ಗುರುವಾರ ಮತ್ತು ಶುಕ್ರವಾರ: ಸಮ ಸಂಖ್ಯೆಯೊಂದಿಗೆ ಕೊನೆ ಆಗುವ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗುತ್ತದೆ,

(ದೆಹಲಿಯಲ್ಲಿ ಜಾರಿ ಆದ ಸಮ-ಬೆಸ ಸೂತ್ರದಂತೆ – ಆ ನಿರ್ಬಂಧ ಅವಶ್ಯಕ ಸೇವೆಗಳ ಓಡಾಟಕ್ಕೆ ಅನ್ವಯಿಸಲ್ಲ)

ಬಸ್‌ಗಳ ಓಡಾಟ:

ವಿನಾಯ್ತಿ ಇರುವ ಜಿಲ್ಲೆಗಳಲ್ಲಿ 50 ರಿಂದ 60 ಕಿಲೋ ಮೀಟರ್‌ ವ್ಯಾಪ್ತಿಯೊಳಗೆ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಪ್ರಯಾಣಿಕರು ಮಾಸ್ಕ್‌ ಧರಿಸುವುದು ಕಡ್ಡಾಯ. ಬಸ್‌ಗೆ ಹತ್ತುವ ಮೊದಲು ಕೈಗೆ ಸ್ಯಾನಿಟೈಸರ್‌ ಹಾಕಿಕೊಳ್ಳಬೇಕು. ಬಸ್‌ನಲ್ಲಿ ಪ್ರಯಾಣಿಕರು ನಿಂತುಕೊಂಡು ಹೋಗುವಂತಿಲ್ಲ. ಮೂರು ಸೀಟ್‌ಗಳ ನಡುವೆ ಮಧ್ಯದ ಸೀಟ್‌ನ್ನು ಖಾಲಿ ಬಿಡಬೇಕು. ಎರಡೂ ಸೀಟುಗಳ ಸಾಲಿನಲ್ಲಿ ಒಬ್ಬರಷ್ಟೇ ಕೂರಲು ಅವಕಾಶ.

ಸಲೂನ್‌ ಶಾಪ್:

ಶನಿವಾರ ಮತ್ತು ಭಾನುವಾರ ಸಲೂನ್‌ ಶಾಪ್‌ಗಳನ್ನು ತೆರೆಯಬಹುದಾಗಿದೆ.

ಹೋಟೆಲ್‌-ರೆಸ್ಟೋರೆಂಟ್:

‌ಹೋಟೆಲ್‌-ರೆಸ್ಟೋರೆಂಟ್ ಸಂಜೆ 7 ಗಂಟೆಯವರೆಗೆ ಓಪನ್‌ ಆಗಿರಬಹುದು. ರಾತ್ರಿ 8 ಗಂಟೆವರೆಗೆ ಪಾರ್ಸೆಲ್‌ ಅವಕಾಶ ಇದೆ.

ಸರ್ಕಾರಿ ಕಚೇರಿ:

ಸರ್ಕಾರಿ ಕಚೇರಿಗಳು ಶೇಕಡಾ 33ರಷ್ಟು ನೌಕರರ ಹಾಜರಾತಿಯೊಂದಿಗೆ ಕಾರ್ಯನಿರ್ವಹಿಸಬಹುದಾಗಿದೆ.

ಲಾಕ್‌ಡೌನ್‌ನಿಂದ ವಿನಾಯ್ತಿ ಘೋಷಿಸಿದ ಸಿಎಂ ಯಡಿಯೂರಪ್ಪ

LEAVE A REPLY

Please enter your comment!
Please enter your name here