ಕರ್ನಾಟಕದಲ್ಲಿ ಲಾಕ್‌ಡೌನ್‌ನಿಂದ ಇಷ್ಟಕ್ಕೆಲ್ಲ ವಿನಾಯಿತಿ ಸಿಗಬಹುದು..! – ಏಪ್ರಿಲ್‌ ೧೪ರ ಬಳಿಕ

ಏಪ್ರಿಲ್‌ ೧೪ರ ಬಳಿಕ ಕರ್ನಾಟಕದಲ್ಲಿ ಲಾಕ್‌ಡೌನ್‌ನಿಂದ ಕೆಲವೊಂದಿಷ್ಟು ವಿನಾಯಿತಿ ಸಿಗುವ ಸಾಧ್ಯತೆ ಇದ್ದು, ಸರ್ಕಾರವೇ ನೇಮಿಸಿದ್ದ ತಜ್ಞರ ಸಮಿತಿ ಕೆಲವೊಂದಿಷ್ಟು ಶಿಫಾರಸ್ಸುಗಳನ್ನು ನೀಡಿದೆ.

೧. ಮೇ ೩೧ರವರೆಗೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳನ್ನು ತೆರೆಯಬಾರದು.

೨. ಕೊರೋನಾ ಪೀಡಿತ ಜಿಲ್ಲೆಗಳಲ್ಲಿ ಕೊರೋನಾ ರೋಗಿಗಳು ಇರುವ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು.

೩. ರಾಜ್ಯಾದ್ಯಂತ ಎ ಸಿ ಇಲ್ಲದ ಅಂಗಡಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡುವುದು

೪. ಖಾಸಗಿ ಕಾರ್ಖಾನೆಗಳಲ್ಲಿ ಶೇಕಡಾ ೫೦ರಷ್ಟು ಕಾರ್ಮಿಕರೊಂದಿಗೆ ಕೆಲಸ ನಿರ್ವಹಿಸಲು ಅವಕಾಶ ಮಾಡಿಕೊಡುವುದು.

೫. ಸರ್ಕಾರಿ ಕಚೇರಿಗಳಲ್ಲಿ ಶೇಕಡಾ ೫೦ರ ಹಾಜರಾತಿ ಮಿತಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡುವುದು

೬. ಅಂತರರಾಜ್ಯ ಗಡಿಗಳಲ್ಲಿ ಸರಕು ಸಾಗಾಣಿಕೆ ವಾಹನಗಳ ಸಂಚಾರಕ್ಕೆ ಒಪ್ಪಿಗೆ ನೀಡುವುದು

೭. ಏಪ್ರಿಲ್‌ ೩೦ರವರೆಗೆ ಏಸಿ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಖಾಸಗಿ ಬಸ್‌, ನಮ್ಮ ಮೆಟ್ರೋ ರೈಲುಗಳ ಓಡಾಟಕ್ಕೆ ನಿರ್ಬಂಧ ಮುಂದುವರಿಸುವುದು.

೮. ಖಾಸಗಿ ವಾಹನಗಳ ಓಡಾಟಕ್ಕೆ ದೆಹಲಿಯಲ್ಲಿ ಜಾರಿ ಆದಂತೆ ಸಮ-ಬೆಸ ಸಂಖ್ಯೆಗಳ ಸೂತ್ರವನ್ನು ಅನುಸರಿಸುವುದು

೯. ದಿನವಿಡೀ ಅಂಗಡಿ ಮಳಿಗೆಗಳನ್ನು ತೆರೆಯುವ ಮೂಲಕ ಜನಸಂದಣಿಯನ್ನು ತಡೆಗಟ್ಟುವುದು

ಇದರ ನಡುವೆ ಲಾಕ್‌ಡೌನ್‌ ಹೊತ್ತಲ್ಲಿ ಮದ್ಯ ಮಾರಾಟದಲ್ಲಿ ಸರ್ಕಾರ ವಿನಾಯಿತಿಯನ್ನು ನೀಡುವ ಸಾಧ್ಯತೆ ಇದೆ. ಬೆಳಗ್ಗೆ ೧೦ ಗಂಟೆವರೆಗೆ ಮಧ್ಯಾಹ್ನ ೧ ಗಂಟೆವೆರೆಗ ಮದ್ಯ ಮಾರಾಟಕ್ಕೆ ಅವಕಾಶ ಸಿಗಬಹುದು. ಇವತ್ತು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ಆದಾಯ ಉಳಿಸಿಕೊಳ್ಳುವ ಸಲುವಾಗಿ ಮದ್ಯದಂಗಡಿಗಳನ್ನು ತೆರೆಯಬೇಕಾಗುತ್ತದೆ ಎಂದಿದ್ದಾರೆ.

ಇನ್ನು ಕೊರೋನಾ ಪ್ರಕರಣ ವರದಿ ಆಗಿರುವ ೧೮ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವೆರೆಯುವ ನಿರೀಕ್ಷೆ ಇದೆ.

LEAVE A REPLY

Please enter your comment!
Please enter your name here