ಕರೋನಾ ವೈರಸ್‌ ಬಗ್ಗೆ ಮೊದಲೇ ಎಚ್ಚರಿಸಿದ್ದ ಚೀನಾದ ಡಾಕ್ಟರ್‌ ಕರೋನಾ ವೈರಸ್‌ಗೆ ಬಲಿ..! – ಮನಮಿಡಿಯುವ ಸುದ್ದಿ

ಕರೋನಾ ವೈರಸ್‌ ಬಗ್ಗೆ ಮೊದಲೇ ಎಚ್ಚರಿಸಿದ್ದ ಚೀನಾ ವೈದ್ಯರಾಗಿರುವ ಡಾ ಲೀ ವೆನ್‌ಲಿಯಾಂಗ್‌ ನಿಧನರಾಗಿದ್ದಾರೆ. ಕರೋನಾ ವೈರಸ್‌ ರೋಗಕ್ಕೆ ತುತ್ತಾಗಿದ್ದ ವೆನ್‌ ಲಿಯಾಂಗ್‌ ಕೊನೆಯುಸಿರೆಳೆದಿದ್ದಾರೆ.

ಜನವರಿಯಲ್ಲೇ ಚೀನಾದ ವುಹಾನ್‌ನಲ್ಲಿ ಕರೋನಾ ವೈರಸ್‌ ಪತ್ತೆ ಆಗಿತ್ತು. ಈ ಬಗ್ಗೆ ಲೀ ಮೊದಲೇ ಎಚ್ಚರಿಕೆ ನೀಡಿದ್ದರು. ಆದ್ರೆ ಅವರ ಕ್ಲಿನಿಕ್‌ಗೆ ಭೇಟಿ ನೀಡಿದ್ದ ಚೀನಾದ ಪೊಲೀಸರು ಸುಮ್ಮನಿರುವಂತೆ ಎಚ್ಚರಿಸಿದ್ದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಲೀ ಎಲ್ಲರ ಹೀರೋ ಆದರು.

ವುಹಾನ್‌ನಲ್ಲಿ ವೈದ್ಯ ಲೀ ಸೇವೆ ಸಲ್ಲಿಸುತ್ತಿದ್ದರು. ಡಿಸೆಂಬರ್‌ ವೇಳೆ ೨೦೦೩ರಲ್ಲಿ ಜಾಗತಿಕವಾಗಿ ಭೀತಿ ಹುಟ್ಟಿಸಿದ್ದ ರೀತಿಯ ವೈರಸ್‌ ಬಗ್ಗೆ ಪತ್ತೆ ಮಾಡಿದ್ದರು. ಹ್ಯೂನಾನ್‌ ಸೀಫುಡ್‌ ಮಾರ್ಕೆಟ್‌ನಿಂದ ರೋಗದ ಮೊದಲ ಲಕ್ಷಣಗಳು ಪತ್ತೆ ಆಗಿತ್ತು.

ಡಿಸೆಂಬರ್‌ ೩೦ರಂದೇ ತನ್ನ ಸಹೋದ್ಯೋಗಿ ವೈದ್ಯರಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದ ಡಾಕ್ಟರ್‌ ಲೀ ವೈರಸ್‌ ಹರಡುವಿಕೆಯನ್ನು ತಪ್ಪಿಸಲು ಅಗತ್ಯ ರಕ್ಷಣಾತ್ಮಕ ಪ್ರತಿರೋಧಕ ವಸ್ತುಗಳನ್ನು ಧರಿಸುವಂತೆ ಎಚ್ಚರಿಸಿದ್ದರು. ಆದರೆ ಇದು ಕರೋನಾ ವೈರಸ್‌ ಕುಖ್ಯಾತಿ ಪಡೆದುಕೊಳ್ಳುತ್ತೆ ಎಂದು ಡಾಕ್ಟರ್‌ ಭಾವಿಸಿರಲಿಲ್ಲ.

ಈ ಮೇಸೆಜ್‌ ಕಳುಹಿಸಿದ ನಾಲ್ಕೇ ದಿನಕ್ಕೆ ಪೊಲೀಸರು ಎಚ್ಚರಿಕೆಯನ್ನು ಕೊಟ್ಟರು. ಅಲ್ಲದೇ ಸುಳ್ಳು ಹೇಳಿ ಜನರಲ್ಲಿ ಭೀತಿ ಹುಟ್ಟಿಸುತ್ತಿದ್ದಾರೆ ಎಂಬ ಪತ್ರಕ್ಕೆ ಬಲವಂತವಾಗಿ ಪೊಲೀಸರು ಡಾಕ್ಟರ್‌ ಲೀ ಅವರಿಂದ ಸಹಿ ಹಾಕಿಸಿಕೊಂಡು ಮುಚ್ಚಳಿಕೆ ಬರೆಸಿಕೊಂಡಿದ್ದರು.

ಇದಾದ ಬಳಿಕ ಜನರಿಯಲ್ಲಿ ಕರೋನಾ ವೈರಸ್‌ಗೆ ಜನ ಪ್ರಾಣ ಕಳೆದುಕೊಳ್ಳಲು ಶುರುವಾಗ್ತಿದ್ದಂತೆ ಪೊಲೀಸರು ತಪ್ಪಿನ ಅರಿವಾಗಿತ್ತು. ಡಾಕ್ಟರ್‌ ಲೀ ಬಳಿ ಕ್ಷಮೆಯನ್ನೂ ಕೇಳಿದರು. ಆದ್ರೆ ಅಷ್ಟೊತ್ತಿಗಾಗಲೇ ಸಮಯ ಮೀರಿ ಹೋಗಿತ್ತು.

ತಮ್ಮ ಕ್ಲಿನಿಕ್‌ಗೆ ಬಂದಿದ್ದ ಗ್ಲುಕೋಮಾ ಪೀಡಿತ ಮಹಿಳೆಗೆ ಡಾಕ್ಟರ್‌ ಲೀ ಚಿಕಿತ್ಸೆ ನೀಡಿದ್ದರು. ಆದರೆ ಈ ಚಿಕಿತ್ಸೆ ಕೊಟ್ಟ ಮರು ದಿನವೇ ಲೀ ಅವರಿಗೆ ಕಫ ಮತ್ತು ಕೆಮ್ಮು ಶುರುವಾಯ್ತು. ಬಳಿಕ ಜ್ವರ ಪೀಡಿತರಾಗಿ ಎರಡು ದಿನದಲ್ಲಿ ಆಸ್ಪತ್ರೆಗೆ ಸೇರಿಕೊಂಡರು. ಅವರ ಮನೆಯವರಿಗೂ ಕರೋನಾ ಹರಡಿ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಯ್ತು.

ಇದಾದ ೧೦ ದಿನಗಳ ನಂತರ ಜನವರಿ ೨೦ರಂದು ಚೀನಾದ ಕರೋನಾ ವೈರಸ್‌ ಬಗ್ಗೆ ಅಧಿಕೃತ ಘೋಷಣೆ ಮಾಡಿ ತುರ್ತುಪರಿಸ್ಥಿತಿ ಹೇರಿತು.

LEAVE A REPLY

Please enter your comment!
Please enter your name here