ಕರೋನಾಗೆ ತುತ್ತಾದ ಮೊದಲ ಭಾರತೀಯರು ಇವರೇ.. ಚಿಕಿತ್ಸೆಗೆ ಬೇಕು ಕೋಟಿ ಕೋಟಿ ರೂ. ನೀವು ನೆರವಾಗಿ

ಚೀನಾದಲ್ಲಿ ಕರೋನಾ ವೈರಸ್ ಶರವೇಗದಲ್ಲಿ ಹರಡುತ್ತಿದ್ದು, ಭಾರೀ ಆತಂಕ ಸೃಷ್ಟಿಸಿದೆ. ಕರೋನಾ ವೈರಸ್‍ಗೆ ತುತ್ತಾದವರಲ್ಲಿ ಭಾರತೀಯ ಮಹಿಳೆ ಒಬ್ಬರು ಇದ್ದಾರೆ. ಅವರೇ ಪ್ರೀತಿ ಮಹೇಶ್ವರಿ.

ಚೀನಾದ ಶೆನ್‍ಜೆನ್‍ನಲ್ಲಿ ಇಂಟರ್‍ನ್ಯಾಷನಲ್ ಸ್ಕೂಲ್ ಆಪ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಅಧ್ಯಾಪಕಿಯಾಕಿರುವ 45 ವರ್ಷದ ಪ್ರೀತಿ ಮಹೇಶ್ವರಿಗೆ ಮಾರಕ ಕರೋನಾ ವೈರಸ್ ಸೋಕಿದೆ. ನ್ಯೂಮೋನಿಯಾ, ಟೈಪ್ 1 ರೆಸ್ಪಿರೇಟರಿ ಫೆಲ್ಯೂರ್,ಮಲ್ಟಿ ಆರ್ಗಾನ್ ಡಿಸ್ಫಂಕ್ಷನ್ ಸಿಂಡ್ರೋಮ್(ಮೋಡ್ಸ್), ಸೆಪ್ಟಿಕ್ ಶಾಕ್‍ನಿಂದ ಬಳಲುತ್ತಿರುವ ಪ್ರೀತಿ ಮಹೇಶ್ವರಿಗೆ ಶೆನ್‍ಜೆನ್‍ನಲ್ಲಿರುವ ಷೆಕೌ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೆಂಟಿಲೇಟರ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿರಂತರವಾಗಿ ಡಯಾಲಿಸಿಸ್ ಮಾಡಲಾಗುತ್ತಿದೆ.

ಆದರೆ, ಜನವರಿ 11ರಿಂದ ಇಲ್ಲಿಯವರೆಗೆ ಪ್ರೀತಿ ಮಹೇಶ್ವರಿ ಚಿಕಿತ್ಸೆಗೆ ಈಗಾಗಲೆ 1 ಕೋಟಿ ರೂಪಾಯಿ ಖರ್ಚಾಗಿದೆ. ಇನ್ನೂ ಒಂದು ಕೋಟಿಗೂ ಹೆಚ್ಚು ಹಣ ಬೇಕಿದೆ. ಈ ಹಣ ಹೊಂದಿಸಲು ಅವರ ಕುಟುಂಬ ಪರದಾಡುತ್ತಿದೆ. ಭಾರತ ಸರ್ಕಾರ, ಚೀನಾ ಸರ್ಕಾರವನ್ನು ನೆರವಿಗೆ ಧಾವಿಸುವಂತೆ ಮನವಿ ಮಾಡಿಕೊಂಡಿದೆ. ಅಲ್ಲದೇ ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ.

ಆರೋಗ್ಯ ವಲಯದ ಕ್ರೌಡ್ ಫಂಡಿಂಗ್ ಪ್ಲಾಟ್‍ಫಾರ್ಮ್ ಇಂಪ್ಯಾಕ್ಟ್ ಗುರು.ಕಾಮ್ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ಇಲ್ಲಿಯವರೆಗೂ 27 ಲಕ್ಷ ರೂಪಾಯಿ ಸಂಗ್ರಹವಾಗಿದೆ.

ಕರೋನಾ ವೈರಸ್ ಕೇಂದ್ರಬಿಂದುವಾದ ವುಹಾನ್‍ನಲ್ಲಿಯೇ 500ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ವೈದ್ಯಕೈ ಶಿಕ್ಷಣ ಪಡೆಯುತಿದ್ದಾರೆ. ಚೀನಾದಲ್ಲಿರುವ ತಮ್ಮವರ ಬಗ್ಗೆ ತಿಳಿದುಕೊಳ್ಳಲು ಭಾರತೀಯ ರಾಯಭಾರ ಕಚೇರಿ ಎರಡು ಹಾಟ್‍ಲೈನ್ ತೆರೆದಿದೆ. +8618612083629,+8618612083617 ನಂಬರ್ ಮೂಲಕ ಸಂಪರ್ಕಿಸಬಹುದಾಗಿದೆ

LEAVE A REPLY

Please enter your comment!
Please enter your name here