ಕರೆ ಮಾಡಿ ರೆಕಾರ್ಡ್ ಮಾಡಿ ವೈರಲ್ ಮಾಡಿದರೆ ಜೈಲು: ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ ಜಿಲ್ಲಾಧಿಕಾರಿಗಳಿಗೆ ಮುಂಬೈನಿಂದ ಕಿಡಿಗೇಡಿಗಳು ಕರೆ ಮಾಡಿ ರೆಕಾರ್ಡ್ ಮಾಡಿ ವೈರಲ್ ಮಾಡುತ್ತಿದ್ದಾರೆ, ಈ ಬಗ್ಗೆ ಪ್ರತಿಕ್ರಯಿಸಿದ ಜಿಲ್ಲಾಧಿಕಾರಿ ಜಗದೀಶ್‌ ಜಿ ಈ ರೀತಿ ಮಾಡುವುದು ಇವತ್ತಿಗೇ ಕೊನೆಯಾಗಬೇಕು. ನಾಳೆಯಿಂದ ಈ  ರೀತಿ ಯಾರಾದರೂ  ಮಾಡಿದರೆ ಅವರು ಜೈಲಲ್ಲಿ ಇರುತ್ತಾರೆ ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಬಹಳಷ್ಟು ಜನ ಮುಂಬೈಯಲ್ಲಿ ಕುಳಿತು ಡಾನ್ ಥರ ಮಾತನಾಡುತ್ತಿದ್ದಾರೆ, ಕಿಡಿಗೇಡಿಗಳು ಸಣ್ಣಪುಟ್ಟ ಕಾರಣಗಳಿಗೂ ಕರೆ ಮಾಡುವುದು ಮಾತ್ರವಲ್ಲದೇ ಆ ಸಂಭಾಷಣೆಯ ಆಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿ ವೈರಲ್ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಹೀಗೆ ಫೋನ್ ಸಂಭಾಷಣೆಗಳನ್ನು ರೆಕಾರ್ಡ್ ಮಾಡಿ ವೈರಲ್‌ ಮಾಡುವ ಕೆಲಸ ಇವತ್ತಿಗೆ ಕೊನೆಯಾಗಬೇಕು. ನಾಳೆಯಿಂದ ಯಾರಾದರೂ ಹೀಗೆ ಮಾಡಿದರೆ ಅಂತಹ ವ್ಯಕ್ತಿಗಳನ್ನು ಮುಲಾಜಿಲ್ಲದೆ ಜೈಲಿಗಟ್ಟುತ್ತೇನೆ ಎಂದು ಜಗದೀಶ್ ಎಚ್ಚರಿಕೆ ನೀಡಿದ್ದಾರೆ

ಫೋನ್ ಮಾಡಿ ಅಧಿಕಾರಿಗಳನ್ನು ಹೆದರಿಸುವ ಆಟ ಉಡುಪಿ ಜಿಲ್ಲಾಡಳಿತದ ಮುಂದೆ ಇದೆಲ್ಲಾ ಆಟ ನಡೆಯುವುದಿಲ್ಲ, ಅಂಥವರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದ್ದಾರೆ.

ಇಲ್ಲಿ ಯಾರಾದರೂ ಅಂತಹ ವಿಡಿಯೋ ಅಥವಾ ಆಡಿಯೋ ಶೇರ್ ಮಾಡಿದರೆ ಅವರಿಗೂ ಶಿಕ್ಷೆಯಾಗುತ್ತದೆ. ನಾವು ಏನೂ ಕೆಲಸ ಮಾಡುತ್ತಿಲ್ಲ ಎಂದು ಬಿಂಬಿಸುವ ಪ್ರಯತ್ನಗಳು ನಡೆಯುತ್ತಿವೆ.

ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಬಯ್ಯೋದು ಮಾಡಿದರೆ ನಿಮ್ಮ ಆಟ ನಡೆಯುವುದಿಲ್ಲ, ಆ ವ್ಯಕ್ತಿ ಎಷ್ಟೇ ದೊಡ್ಡ ಮನುಷ್ಯನಾದರೂ ಹಿಡಿದು ಜೈಲಿಗೆ ಹಾಕುತ್ತೇವೆ, ನಾವು ಮೂರು ತಿಂಗಳಿಂದ ಹಗಲು-ರಾತ್ರಿಯೆನ್ನದೆ ಕೆಲಸ ಮಾಡುತ್ತಿದ್ದೇವೆ ಆದರೆ ಈ ಕಿಡಿಗೇಡಿಗಳು ಯಾರೂ ಏನು ಕೆಲಸ ಮಾಡುತ್ತಿಲ್ಲ ಕೇವಲ ಅಶಾಂತಿ ಹರಡುತ್ತಿದ್ದಾರೆ.

ಮನೆಯಿಂದ ಬಟ್ಟೆ ಕೊಡುತ್ತೇವೆ, ಊಟ ಕೊಡುತ್ತೇವೆ ಎಂದರೆ ಅದು ಸಾಧ್ಯವಿಲ್ಲ, ಯಾವುದೇ ಕಾರಣಕ್ಕೂ ಕ್ವಾರಂಟೈನ್‌ ಕೇಂದ್ರಕ್ಕೆ ಹೊರಗಿನ ವಸ್ತುಗಳನ್ನು ಕೊಡಲು ಅವಕಾಶವಿಲ್ಲ. ಕ್ವಾರಂಟೈನ್ ಕೇಂದ್ರದಿಂದ ಬಟ್ಟೆ ,ಊಟದ ಜೊತೆ ಕರೋನ ವೈರಸ್ ಬರುತ್ತದೆ.ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಬಂದು ಕ್ವಾರೆಂಟೈನ್ ಕೇಂದ್ರಗಳಲ್ಲಿ ಇರುವವರು ಜಿಲ್ಲಾಡಳಿತದೊಂದಿಗೆ ಅಗತ್ಯವಾಗಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಯವರು ಇದೇ ಸಂದರ್ಭದಲ್ಲಿ ನುಡಿದರು.

ನಮಗೆ ನಮ್ಮ ಜಿಲ್ಲೆಯ 13 ಲಕ್ಷ ಜನರ ಆರೋಗ್ಯ ಮುಖ್ಯ, ನಮ್ಮ ಜನರಿಗೆ ಸೋಂಕು ಹಬ್ಬಬಾರದು ಎನ್ನುವುದೇ ಮುಖ್ಯ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here