ಕರಾವಳಿ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಣೇಶ್ ರಾವ್ ಅವರಿಂದ ಸಕಾಲಿಕ ನೆರವು

ಲಾಕ್‌ ಡೌನ್‌ ಅವಧಿಯಲ್ಲಿ ಮಂಗಳೂರಿನ ಕೆಲ ಸಾರ್ವಜನಿಕರಗೆ ಜೀವನಾವಶ್ಯಕ ವಸ್ತುಗಳು ದಿನಸಿ ಇತ್ಯಾದಿ ಸೂಕ್ತ ಸಮಯದಲ್ಲಿ ದೊರೆಯದಿರುವುದನ್ನು ಗಮನಿಸಿದ ಕರಾವಳಿ ಕಾಲೇಜು ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಗಣೇಶ್‌ ರಾವ್‌ ಅವರು ರೇಶನ್ ಕಿಟ್‌ಗಳನ್ನು ಬಡವರಿಗೆ ಹಸ್ತಾಂತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಮಾಜ ಸೇವಾ ರಂಗದಲ್ಲಿ ಸದ್ದು-ಗದ್ದಲ ಗಳಿಲ್ಲದೆ, ಸೌಹಾರ್ದತೆಯಿಂದ ನಿಷ್ಪಕ್ಷಪಾತವಾಗಿ ಸಮಾಜದ ಕಷ್ಟಗಳಿಗೆ ಸ್ಪಂದಿಸುವ “ಶ್ರೀ ಎಸ್ ಗಣೇಶ್ ರಾವ್” ಇದೀಗ COVID 19 ಕೊರೊನ ಮಹಾಮಾರಿಯಿಂದ ಆರ್ಥಿಕ ಸಂಕಷ್ಟಕ್ಕೊಳಗಾದ, ಮಂಗಳೂರಿನ ಅರ್ಹ ಬಡ ಕುಟುಂಬಗಳಿಗೆ 10 ಲಕ್ಷ ರೂ. ವೆಚ್ಚದ ರೇಶನ್ ಕಿಟ್ ಗಳನ್ನು ವಿತರಿಸಿದ್ದಾರೆ. ಈ ಕಿಟ್‌ನಲ್ಲಿ  ಅಕ್ಕಿ, ಬೇಳೆ, ಗೋಧಿ ಪುಡಿ, ಮೆಣಸು, ಈರುಳ್ಳಿ, ಚಹಾ ಪುಡಿ, ಸಕ್ಕರೆ ಸೇರಿದಂತೆ 7 ಸಾಮಾಗ್ರಿಗಳು ಇದೆ.

ಈ ಕುರಿತಾಗಿ ಮಾತನಾಡಿದ ಗಣೇಶ್‌ ರಾವ್‌ ಅವರು ಕೊರೊನಾ ವಿರುದ್ಧದ ಹೋರಾಟಕ್ಕೆ ಎಲ್ಲಾ ಪಕ್ಷದ, ಧರ್ಮದ ಜನರು ಜೊತೆಯಾಗಿದ್ದಾರೆ. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ ಕೊರೊನಾ ಸಮರದಲ್ಲಿ ಸಂಘಟಿತರಾಗಿ ಹೋರಾಡಿ ಗೆಲ್ಲೋಣ, ಹಾಗೆಯೇ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾ, ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಪೊಲೀಸ್‌ ಅಧಿಕಾರಿಗಳನ್ನು ಬೆಂಬಲಿಸಬೇಕು ಎಂದಿದ್ದಾರೆ.

LEAVE A REPLY

Please enter your comment!
Please enter your name here