ಕಬ್ಬಡಿ ಆಟಗಾರ್ತಿ ಮೇಲೆ ಹಲ್ಲೆ – ಬೆಂಗಾಲ್‌ ವಾರಿಯರ್ಸ್‌ ಕೋಚ್‌ ರಮೇಶ್‌ ಅರೆಸ್ಟ್‌

ಕಬ್ಬಡಿ ಆಟಗಾರ್ತಿ ಉಷಾ ರಾಣಿ ಮೇಲೆ ಹಲ್ಲೆ ನಡೆಸಿದ್ದರ ಸಂಬಂಧ ಮಾಜಿ ಕಬ್ಬಡಿ ಆಟಗಾರ ಮತ್ತು ಪ್ರೊ ಕಬ್ಬಡಿ ಲೀಗ್‌ನಲ್ಲಿ ಬೆಂಗಾಲ್‌ ವಾರಿಯರ್ಸ್‌ ತಂಡದ ಕೋಚ್‌ ಬಿ ಸಿ ರಮೇಶ್‌ರನ್ನು ಬೆಂಗಳೂರು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ.

ಬೆಂಗಳೂರಿನ ಕಂಠೀರವ ಮೈದಾನದಲ್ಲಿ ಕಬ್ಬಡಿ ಅಭ್ಯಾಸ ವೇಳೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ಸಂಬಂಧ ಎಸ್‌ ಆರ್‌ ನಗರ ಪೊಲೀಸ್‌ ಠಾಣೆಯಲ್ಲಿ ಉಷಾ ರಾಣಿ ದೂರು ನೀಡಿದ್ದರು.

2018ರಲ್ಲಿ ಇಂಡೋನೇಷ್ಯಾ ರಾಜಧಾನಿ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಗೆದ್ದ ಭಾರತ ಮಹಿಳೆ ತಂಡದ ಆಟಗಾರ್ತಿ ಆಗಿರುವ ಉಷಾರಾಣಿ ದೊಡ್ಡಬಳ್ಳಾಪುರ ಪೊಲೀಸ್‌ ಠಾಣೆಯಲ್ಲಿ ಕಾನ್ಸ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2007ರಲ್ಲಿ ಕ್ರೀಡಾ ಕೋಟಾದಲ್ಲಿ ಕರ್ನಾಟಕ ಪೊಲೀಸ್‌ ಸೇವೆಗೆ ಆಯ್ಕೆಯಾಗಿದ್ದರು.

2019ರಲ್ಲಿ ಬೆಂಗಾಲ್‌ ವಾರಿಯರ್ಸ್‌ ಕೋಚ್‌ ರಮೇಶ್‌ ಮಾರ್ಗದರ್ಶನದಲ್ಲಿ ಮೊದಲ ಬಾರಿಗೆ ಪ್ರೊ ಕಬ್ಬಡಿ ಲೀಗ್‌ ಟ್ರೋಫಿ ಗೆದ್ದುಕೊಂಡಿತ್ತು. 2004ರಲ್ಲಿ ಕಬ್ಬಡಿ ವಿಶ್ವಕಪ್‌, 2002 ಮತ್ತು 2006ರಲ್ಲಿ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನದ ಗೆದ್ದ ತಂಡದಲ್ಲಿ ಭಾರತ ತಂಡದಲ್ಲಿ ಬಿ ಸಿ ರಮೇಶ್‌ ಕೂಡಾ ಇದ್ದರು.

LEAVE A REPLY

Please enter your comment!
Please enter your name here