ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ

ಮೌಂಟ್ ಮೌಂಗನೌನಲ್ಲಿ ನ್ಯೂಜಿಲೆಂಡ್‍ನಲ್ಲಿ ನಡೆಯುತ್ತಿರುವ ಮೂರನೇ ಏಕ ದಿನಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಶತಕ ಸಿಡಿಸಿದ್ದಾರೆ. 104 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ.

9 ಬೌಂಡರಿ ಮತ್ತು 2 ಸಿಕ್ಸರ್ ಅನ್ನು ರಾಹುಲ್ ಶತಕ ಒಳಗೊಂಡಿದೆ. ಇದು ಕೆಎಲ್ ರಾಹುಲ್ ಅವರ ವೃತ್ತಿ ಜೀವನದ ನಾಲ್ಕನೇ ಶತಕವಾಗಿದೆ.ಕೆಎಲ್ ರಾಹುಲ್ 112 ರನ್ ಗಳಿಸಿದ್ದಾಗ ಬೆನೆಟ್ ಬೌಲಿಂಗ್‍ನಲ್ಲಿ ಜಾಮಿಸನ್‍ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

ಕೆಎಲ್ ರಾಹುಲ್ ಭರ್ಜರಿ ಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿ ಓವರ್‍ಗಳಲ್ಲಿ ಭರ್ಜರಿ 296 ರನ್ ಗಳಿಸಿದೆ. ಕಿವೀಸ್‍ಗೆ 297 ರನ್‍ಗಳ ಟಾರ್ಗೆಟ್ ನೀಡಿದೆ.

LEAVE A REPLY

Please enter your comment!
Please enter your name here