ಕತ್ರಿನಾ ಕೈಫ್ ಳ ಖುಷಿ ಪಾತ್ರೆ ತೊಳೆಯುವುದರಲ್ಲಿಯೂ ಇದೆಯೇ?!

ಕತ್ರಿನಾ ಕೈಫ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ತಮ್ಮ ನಟನೆಯಿಂದಲೇ ಎಲ್ಲರ ಮನಸೋರೆ ಗೊಂಡ ನಟಿ. ಉತ್ತಮ ನಟನೆಯಿಂದ ಹಲವಾರು ಜನ ಅಭಿಮಾನಿಗಳನ್ನು ಹೊಂದಿರುವ ನಟಿ. ನಟನೆಗಾಗಿ ದೇಶ ವಿದೇಶ ಸುತ್ತುತ್ತಾ ಕಾಲ ಕಳೆಯುತ್ತಿದ್ದ ನಟಿಗೆ ಈಗ ಕರೋನಾ ದಿಗ್ಭಂಧನ ವಿಧಿಸಿದೆ.

ಮನೆಯಲ್ಲಿಯೇ ಇರುವಂತೆ ಮಾಡಿದ ಕರೋನಾ ಎಫೆಕ್ಟ್ ನಿಂದ ಕಿಂಚಿತ್ತೂ ಬೇಸರಗೊಳ್ಳದ ಈ ನಟಿ ಈಗ ತಾವೇ ಸ್ವತಃ ಅಡುಗೆ ಮಾಡಿಕೊಳ್ಳುವುದು ಮತ್ತು ಪಾತ್ರೆ ತೊಳೆಯುವುದು ಮಾಡುತ್ತಿದ್ದಾರೆ. ಇದರಲ್ಲಿಯೂ ಒಂದು ತರ ಮನಸ್ಸಿಗೆ ಖುಷಿ ಇದೆ ಎಂದು ಹೇಳಿಕೊಳ್ಳುವ ಇವರು ತಾವು ಮಾಡುವ ಕೆಲಸದ ವೀಡಿಯೋವನ್ನು ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು ಲಕ್ಷಾಂತರ ಮಂದಿಯಿಂದ ಲೈಕ್ ಪಡೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here