ಕತ್ತಿ ಹಿಡಿದ ಕೈಯಲ್ಲಿ ಪೊರಕೆ ಹಿಡಿದ ಸ್ಟಾರ್ ಹೀರೋ

ನಟ ಜ್ಯೂನಿಯರ್ ಎನ್‍ಟಿಆರ್.. ಬೆಳ್ಳಿ ತೆರೆ ಮೇಲೆ ಕತ್ತಿ ಹಿಡಿದು ಹೀರೋ ಆಗಿ ಪೋಸ್ ಕೊಟ್ಟಿದ್ದೇ ಹೆಚ್ಚು.. ರೀಲ್‍ನಲ್ಲಿ ಕತ್ತಿ ಹಿಡಿದ ಕೈಗಳು ಇದೀಗ ಪೊರಕೆ ಹಿಡಿದಿವೆ. ಇದು ಲಾಕ್‍ಡೌನ್ ಎಫೆಕ್ಟ್.

ಆರ್ ಆರ್ ಸಿನಿಮಾದ ಶೂಟಿಂಗ್‍ನಿಂದ ವಿರಾಮ ಸಿಕ್ಕಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಕಾಲ ಕಳೆಯುತ್ತಿರುವ ಟಾಲಿವುಡ್ ಸ್ಟಾರ್ ಹೀರೋ ಜ್ಯೂನಿಯರ್ ಎನ್‍ಟಿಆರ್, ಪ್ರೀತಿಯ ಮಡದಿಯ ನೆರವಿಗೆ ನಿಂತಿದ್ದಾರೆ. ಮನೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ನೆಲ ಒರೆಸುವ ಸ್ಟಿಕ್ ಹಿಡಿದು ಮನೆಯನ್ನೆಲ್ಲಾ ಕ್ಲೀನ್ ಮಾಡಿದ್ದಾರೆ. ತೊಳೆದ ಪಾತ್ರೆಗಳನ್ನು ನೀಟಾಗಿ ಒರೆಸಿ ಇಟ್ಟಿದ್ದಾರೆ. ಪೊರಕೆ ಹಿಡಿದು ಮನೆಯ ಲಾನ್ ಸ್ವಚ್ಛ ಮಾಡಿದ್ದಾರೆ. ಈ ಮೂಲಕ ರಿಯಲ್ ಮ್ಯಾನ್ ಎನಿಸಿಕೊಂಡಿದ್ದಾರೆ.

ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಎಸೆದ ಬಿ ದ ರಿಯಲ್ ಮ್ಯಾನ್ ಚಾಲೆಂಜ್ ಸ್ವೀಕರಿಸಿ, ತಾವು ರಿಯಲ್ ಆಗಿ ಏನು ಎಂಬುದನ್ನು ಕೇವಲ 24 ಗಂಟೆಗಳ ಅವಧಿಯಲ್ಲಿ ತೋರಿಸಿಕೊಟ್ಟು ಅಭಿಮಾನಿಗಳ ಮನ ಗೆದ್ದಿದ್ದಾರೆ.

ಬಾಹುಬಲಿ ಖ್ಯಾತಿಯ ರಾಜಮೌಳಿ ಸಹ ಮನೆಯ ಕೆಲಸಗಳಲ್ಲಿ ನಿರತರಾಗಿದ್ದಾರೆ.ಕೇವಲ ಪ್ರೀತಿಯನ್ನಷ್ಟೇ ಹಂಚಿಕೊಳ್ತಿಲ್ಲ.. ಮನೆಯ ಕೆಲಸಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು

LEAVE A REPLY

Please enter your comment!
Please enter your name here