ಓ ದೇವರೇ.. ಓ ಜನರೇ.. ಇಂತಹ ಅಸಮರ್ಥ ಸರ್ಕಾರ ಬೇಕಾ..? ಡಿಕೆ ಗರಂ..

ಕೊರೋನಾ ಸೋಂಕಿನ ಆಪತ್ತಿನಿಂದ ರಾಜ್ಯವನ್ನು ಆ ದೇವರೇ ಕಾಪಾಡಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದರು.

ಇದೀಗ ಸಚಿವ ರಾಮುಲು ಹೇಳಿಕೆಯನ್ನೇ ವಿರೋಧ ಪಕ್ಷ ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿದೆ. ಸಚಿವ ರಾಮುಲು ಹೇಳಿಕೆ ಬಿಎಸ್ ವೈ ಸರ್ಕಾರ ಕೊರೋನಾ ಬಿಕ್ಕಟ್ಟಿನ ಸಂದರ್ಭವನ್ನು ಎಷ್ಟು ಕೆಟ್ಟದಾಗಿ ನಿಭಾಯಿಸುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ

ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದ ಇಂತಹ ಅಸಮರ್ಥ ಸರ್ಕಾರ ನಮಗೆ ಬೇಕೆ.. ಎಂದು ಡಿಕೆ ಶಿವಕುಮಾರ್ ಜನರನ್ನು ಪ್ರಶ್ನೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here