ಓದಿದ್ದು ಎಂಜಿನಿಯರಿಂಗ್.. ಮಾಡ್ತಿರೋದು ಬೆಗ್ಗಿಂಗ್.. ಇದು ಕತೆಯಲ್ಲ.. ಜೀವನ..!

ಒಡಿಶಾದ ಜಗದ್ವಿಖ್ಯಾತ ಪುರಿ ಜಗನ್ನಾಥ ದೇವಾಲಯದ ಬಳಿ ಭಿಕ್ಷುಕರೊಬ್ಬರಿದ್ದಾರೆ. ಹೆಸರು ಗಿರಿಜಾ ಶಂಕರ್ ಮಿಶ್ರಾ. ವಯಸ್ಸು 51.
ಕೊಳಕೆದ್ದು ಹೋದ ಬಟ್ಟೆ, ಕೆದರಿದ ಕೂದಲು, ಕುರುಚಲು ಗಡ್ಡ, ಕೈಗೆ ಸಿಕ್ಕಿದ್ದನ್ನು ತಿನ್ನುತ್ತಾ.., ಸಿಗದೇ ಇದ್ದರೇ ಉಪವಾಸ ಇರುತ್ತಾ.. ಚಳಿ, ಮಳೆ, ಬಿಸಿಲಿಗೆ ಮೈಯೊಡ್ಡಿ, ದೇವಾಲಯದ ಬಳಿಯ ಫುಟ್‍ಪಾತ್‍ನಲ್ಲೇ ಮಲಗಿ ಜೀವನ ಸಾಗಿಸ್ತಿದ್ದಾರೆ.

ಆದರೆ, ಈ ಭಿಕ್ಷುಕ ಮೂಲತಃ ಎಂಜಿನಿಯರ್.

ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದ ಅನುಭವ ಇದೆ. ನಿರರ್ಗಳವಾಗಿ ಇಂಗ್ಲೀಷ್ ಮಾತಾಡುತ್ತಾರೆ. ಡೈಲಿ ದಿನ ಪತ್ರಿಕೆ ಓದುತ್ತಾರೆ. ಒಂಚೂರು ತಪ್ಪಿಲ್ಲದೇ ಇಂಗ್ಲೀಷ್‍ನಲ್ಲೇ ಕಂಪ್ಲೆಂಟ್ ಬರೆದುಕೊಡುತ್ತಾರೆ.

ಇದು ಬಯಲಿಗೆ ಬಂದಿದ್ದು ಹೇಗೆ?
ಇತ್ತೀಚಿಗೆ ಆಟೋ ಚಾಲಕನ ಜೊತೆ ಈ ಭಿಕ್ಷುಕನಿಗೆ ಜಗಳ ಆಯ್ತು. ಸೀದಾ ಸ್ಟೇಷನ್‍ಗೆ ಬಂದ ಭಿಕ್ಷುಕ ಗಿರಿಜಾಶಂಕರ್ ಮಿಶ್ರಾ, ವಯಟ್ ಪೇಪರ್ ತೆಗೆದುಕೊಂಡ ದೂರು ಬರೆದುಕೊಟ್ಟ. ಆರು ಸಾಲಿನ ಕಂಪ್ಲೆಂಟ್ ಕಾಪಿ ಇದನ್ನು ನೋಡಿದ ಪೊಲೀಸರು ಶಾಕ್ ಆದರು. ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಕಾರಣ ಅದು ಇಂಗ್ಲೀಷನಲ್ಲಿ ಬರೆದು ಕಂಪ್ಲೆಂಟ್ ಆಗಿತ್ತು. ಭಾಷೆ ಸ್ಫುಟವಾಗಿತ್ತು. ವ್ಯಾಕರಣಬದ್ಧವಾಗಿತ್ತು.

ಯಾವುದೇ ಸಿನಿಮಾಗಿಂತ ಕಡಿಮೆಯಿಲ್ಲ ಭಿಕ್ಷುಕನ ಗತ ಜೀವನ
ಗಿರಿಜಾ ಶಂಕರ್ ಮಿಶ್ರಾ ಅವರದ್ದು ಭುವನೇಶ್ವರ್. ಉನ್ನತ, ಪ್ರತಿಷ್ಠಿತ ಕುಟುಂಬದಿಂದ ಬಂದವರು. ಅಪ್ಪ ಪೊಲೀಸ್ ಅಧಿಕಾರಿ ಆಗಿದ್ದವರು.ಬಿಎಸ್‍ಸಿ ಪೂರ್ತಿ ಮಾಡಿದ ಮಿಶ್ರಾ, ಮುಂದೆ ಸೆಂಟ್ರಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್ ಕಂಪ್ಲೀಟ್ ಮಾಡಿದರು. ಮುಂಬೈನಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿದರು. ಹೈದರಾಬಾದ್‍ನ ಮಿಲ್ಟನ್ ಕಂಪನಿಯಲ್ಲಿಯೂ ಕೆಲಸ ಮಾಡಿದರು.

ಮುಂದೆ ಏನಾಯ್ತು ಅಂತಾ ಗೊತ್ತಿಲ್ಲ. ಪೊಲೀಸರು ಕೇಳಿದರೆ, ಅದು ನನ್ನ ಪರ್ಸನಲ್ ಮ್ಯಾಟರ್.. ಹೇಳಲ್ಲ ಅಂತಿದ್ದಾರೆ. ಈಗಲೂ ಪುರಿ ಜಗನ್ನಾಥನ ದೇವಾಲಯದ ಬಳಿಯೇ ಎಂಜಿನಿಯರ್ ಗಿರಿಜಾ ಶಂಕರ್ ಮಿಶ್ರಾ ಭಿಕ್ಷೆ ಬೇಡುತ್ತಿದ್ದಾರೆ.

LEAVE A REPLY

Please enter your comment!
Please enter your name here