ಒಟ್ಟಿಗೆ ಕುಳಿತು ಊಟ ಮಾಡೋಣ – ಪುತ್ರನ ಮದುವೆ ಬಗ್ಗೆ ಅಭಿಮಾನಿಗಳಿಗೆ ಕುಮಾರಸ್ವಾಮಿ ಭಾವುಕ ಮಾತು

ಕೊರೋನಾ ಲಾಕ್‌ಡೌನ್‌ನಿಂದಾಗಿ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ಪುತ್ರ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ನಿಖಿಲ್‌ ಕುಮಾರಸ್ವಾಮಿ ಮದುವೆ ರೇವತಿ ಅವರೊಂದಿಗೆ ರಾಮನಗರದ ಕೇತಗಾನಹಳ್ಳಿಯಲ್ಲಿ ಸರಳವಾಗಿ ಮುಗಿದಿದೆ. ಕುಟುಂಬಸ್ಥರ ಸಮ್ಮುಖದಲ್ಲಿ ನಿಖಿಲ್‌ ಮತ್ತು ರೇವತಿ ಸತಿಪತಿಗಳಾದರು.

ಇದನ್ನೂ ಓದಿ:

ಲಾಕ್ ಡೌನ್ ನಡುವೆಯೇ ನೆರವೇರಿದ ಸ್ಯಾಂಡಲ್ ವುಡ್‌ ಯುವರಾಜನ ಅದ್ಧೂರಿ ವಿವಾಹ

ರಾಮನಗರದಲ್ಲೇ ಮಗನ ಮದುವೆ ಮಾಡಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳನ್ನು ಕರೆಸಿ ಮದುವೆ ಊಟ ಹಾಕಿಸಿ ಋಣ ತೀರಿಸಬೇಕು ಎಂದುಕೊಂಡಿದ್ದ ಕುಮಾರಸ್ವಾಮಿಗೆ ನಿರಾಸೆ ಆಗಿರುವುದು ನಿಜ. ಮಗನ ಮದುವೆ ಮುಗಿದ ಬಳಿಕ ಕುಮಾರಸ್ವಾಮಿ ಭಾವುಕರಾಗಿ ಟ್ವೀಟಿಸಿದ್ದಾರೆ.

LEAVE A REPLY

Please enter your comment!
Please enter your name here