ಒಂದೇ ಭಾನುವಾರಕ್ಕೆ ಉಲ್ಟಾ ಹೊಡೆದ ಯಡಿಯೂರಪ್ಪ – ನಾಳೆ ಕರ್ನಾಟಕ ಬಂದ್‌ ಇಲ್ಲ – ಎಂದಿನಂತೆ ನಾರ್ಮಲ್‌..!

ಪ್ರತಿ ಭಾನುವಾರವೂ ಜನತಾ ಕರ್ಫ್ಯೂ ಮಾದರಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಘೋಷಿಸಿದ್ದ ಸಿಎಂ ಯಡಿಯೂರಪ್ಪ ಈಗ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಅಂದರೆ ನಾಳೆ ಕರ್ನಾಟಕದಲ್ಲಿ ಕಂಪ್ಲೀಟ್‌ ಲಾಕ್‌ಡೌನ್‌ ಇರಲ್ಲ.

ಮೇ 18ರಂದು ಕ್ಯಾಬಿನೆಟ್‌ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಸಿಎಂ ಬಿಎಸ್‌ವೈ ಮುಂದಿನ ಎರಡು ಭಾನುವಾರ ಅಂದರೆ ಮೇ 31ರವರೆಗೆ (ನಯಾ ಲಾಕ್‌ಡೌನ್‌ನ ಮೊದಲ ಹಂತ ಮುಗಿಯುವವರೆಗೆ) ರಾಜ್ಯ ಕಂಪ್ಲೀಟ್‌ ಬಂದ್‌ ಆಗಿರಲಿದೆ ಎಂದು ಘೋಷಿಸಿದ್ದರು.

ಅದರಂತೆ ಮೇ 25ರಂದು ಭಾನುವಾರ ಇಡೀ ಕರ್ನಾಟಕವೇ ಬಂದ್‌ ಆಗಿತ್ತು. ನಾಳೆ ಅಂದರೆ ಮೇ 31ರಂದು ಭಾನುವಾರ ಸಿಎಂ ಅವರ ಈ ಹಿಂದಿನ ಘೋಷಣೆಯಂತೆ ಕಂಪ್ಲೀಟ್‌ ಲಾಕ್‌ಡೌನ್‌ ಆಗಿರಬೇಕಿತ್ತು.

ಆದರೆ ಭಾನುವಾರದ ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರಿಗೆ ತೊಂದರೆ ಆಗುತ್ತೆ ಎಂಬ ಕಾರಣದಿಂದಾಗಿ ಈಗ ಭಾನುವಾರದ ಲಾಕ್‌ಡೌನ್‌ನಿಂದ ಸರ್ಕಾರ ಹಿಂದೆ ಸರಿದಿದೆ. ಅಂದರೆ ಮೇ 19ರಿಂದ ಜಾರಿ ಆಗಿರುವ ನಯಾ ಲಾಕ್‌ಡೌನ್‌ ಪ್ರಕಾರವೇ ರಾಜ್ಯದಲ್ಲಿ ಜನಜೀವನ ಇರಲಿದೆ.

LEAVE A REPLY

Please enter your comment!
Please enter your name here