ಒಂದೇ ದಿನ 44 – ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಕೊರೋನಾ ಅಬ್ಬರ

ಲಾಕ್‌ಡೌನ್‌ ಘೋಷಣೆ ಆದ 24 ದಿನಗಳ ಬಳಿಕವೂ ಕರ್ನಾಟಕದಲ್ಲಿ ಕೊರೋನಾ ರೋಗಿಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆ ಆಗಿದ್ದು ಇವತ್ತು ಒಂದೇ ದಿನ 44 ಪ್ರಕರಣಗಳು ವರದಿ ಆಗಿವೆ. ಈ ಮೂಲಕ ಕರ್ನಾಟಕದಲ್ಲಿ 359ಕ್ಕೆ ಏರಿಕೆ ಆಗಿದೆ.

ಅತ್ಯಧಿಕ ಎಂದರೆ ಮೈಸೂರಲ್ಲಿ 12 ಮಂದಿ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿದೆ. ಇದರಲ್ಲಿ ನಂಜನಗೂಡಿನ ಕಾರ್ಖಾನೆಯ ಓರ್ವ ನೌಕರನಿಂದಲೇ 11 ಮಂದಿಗೆ ಕೊರೋನಾ ಹಬ್ಬಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಮತ್ತೆ ಮೂವರಿಗೆ ಕೊರೋನಾ ಪಾಸಿಟಿವ್‌ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ 11ಕ್ಕೆ ಏರಿಕೆ ಆಗಿದೆ. ಇವತ್ತಿನ ಮೂರು ಕೇಸ್‌ಗಳಿಗೂ ಜಮಾತ್‌ಗೆ ಹೋಗಿಬಂದವರ ನಂಟಿದೆ. ಜಮಾತ್‌ನಿಂದಾಗಿಯೇ ಜಿಲ್ಲೆಯಲ್ಲಿ 10 ಮಂದಿಗೆ ಕೊರೋನಾ ಜ್ವರ ಹಬ್ಬಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ಇವತ್ತು ಒಂದೇ ಕುಟುಂಬದ ಏಳು ಮಂದಿಗೆ ಕೊರೋನಾ ಜ್ವರ ಬಂದಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೋನಾ ಕೇಸ್‌ 13ಕ್ಕೆ ಏರಿಕೆ ಆಗಿದ್ದು, ಇವರಲ್ಲಿ 10 ಮಂದಿ ಒಂದೇ ಕುಟುಂಬದವರು.

ಚಿಕ್ಕಬಳ್ಳಾಪುರದಲ್ಲೂ ಒಂದೇ ಕುಟುಂಬದ ಮೂವರಿಗೆ ಕೊರೋನಾ ಪಾಸಿಟಿವ್‌ ಕಾಣಿಸಿದೆ. ಬೀದರ್‌ನಲ್ಲಿ 1 ಕೊರೋನಾ ಕೇಸ್‌ ವರದಿ ಆಗಿದೆ.

12 ದಿನಗಳಿಂದ ಕೊರೋನಾ ಕೇಸ್‌ ವರದಿ ಆಗದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು 1 ಕೊರೋನಾ ಪಾಸಿಟಿವ್‌ ಕೇಸ್‌ ಕಾಣಿಸಿಕೊಂಡಿದೆ. ಉಪ್ಪಿನಂಗಡಿ ಮೂಲದ ಈ ವ್ಯಕ್ತಿ ದೆಹಲಿಗೆ ಹೋಗಿ ಬಂದಿದ್ದರು.

ಬೆಂಗಳೂರಲ್ಲಿ 9 ಮಂದಿಗೆ ಕೊರೋನಾ ಜ್ವರ ದೃಢಪಟ್ಟಿದ್ದು, ಇವರಲ್ಲಿ 8 ಮಂದಿಗೆ ಇಬ್ಬರ ಸಂಪರ್ಕದಿಂದಾಗಿಯೇ ಕೊರೋನಾ ಹಬ್ಬಿದೆ.

ಬೆಳಗಾವಿಯಲ್ಲಿ ಮತ್ತೆ ಐವರಿಗೆ ಕೊರೋನಾ ಪಾಸಿಟಿವ್‌ ಕೇಸ್‌ ಕಾಣಿಸಿಕೊಂಡಿದ್ದು, ಈ ಐವರಿಗೂ ಒಂದೇ ಸಂಪರ್ಕದಿಂದ ಕೊರೋನಾ ಬಂದಿದೆ. ಇದು ಕೂಡಾ ಜಮಾತ್‌ನೊಂದಿಗೆ ನಂಟು ಹೊಂದಿರುವ ಪ್ರಕರಣವಾಗಿದೆ.

ವಿಜಯಪುರದಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್‌ ಕೇಸ್‌ ಕಾಣಸಿಕೊಂಡಿದ್ದು, ಒಬ್ಬರಿಂದಲೇ ಇಬ್ಬರಿಗೆ ಕೊರೋನಾ ಹಬ್ಬಿದೆ.

LEAVE A REPLY

Please enter your comment!
Please enter your name here