ಒಂದೇ ತಿಂಗಳಲ್ಲಿ 16 ಸಾವಿರ ರೂಪಾಯಿ ಕ್ಯಾಶ್‌ ಬ್ಯಾಕ್‌ ಗೆಲ್ಲಿ – ಮೋದಿ ಸರ್ಕಾರದ ಆಫರ್‌

ರೂಪೇ ಕಾರ್ಡ್‌ ಬಳಕೆದಾರರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬಂಪರ್‌ ಆಫರ್‌ವೊಂದನ್ನು ಘೋಷಿಸಿದೆ. ರೂಪೇ ಕಾರ್ಡ್‌ ಬಳಸಿ ಬರೋಬ್ಬರೀ 16 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್‌ನ್ನ ಗೆಲ್ಲಬಹುದಾಗಿದೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ ಈ ಆಫರ್‌ನ್ನು ಪ್ರಕಟಿಸಿದೆ.

ರೂಪೇ ಇಂಟರ್‌ನ್ಯಾಷನಲ್‌ ಕಾರ್ಡ್‌ಗಳನ್ನು ಬಳಸಿ ವಿದೇಶಗಳಲ್ಲಿ ವ್ಯವಹಾರ ಮಾಡಿದರೆ ಈ ಆಫರ್‌ ಸಿಗಲಿದೆ. ಯುಇಇ, ಸಿಂಗಾಪುರ್‌, ಶ್ರೀಲಂಕಾ, ಬ್ರಿಟನ್‌, ಅಮೆರಿಕ, ಸ್ಪೈನ್‌, ಸ್ವಿಟ್ಜರ್ಲೆಂಡ್‌ ಮತ್ತು ಥೈಲ್ಯಾಂಡ್‌ಗೆ ಹೋಗುವ ಭಾರತೀಯರು ಪ್ರತಿ ತಿಂಗಳು 16,000 ಕ್ಯಾಶ್‌ ಬ್ಯಾಕ್‌ ಪಡೆಯಬಹುದಾಗಿದೆ.

ಆದರೆ ಈ ಲಾಭವನ್ನು ಪಡೆಯಲು ರೂಪೇ ಕಾರ್ಡ್‌ ಬಳಸಿ ಮಾಡಬೇಕಿರುವ ವ್ಯವಹಾರದ ಕನಿಷ್ಠ ಮೊತ್ತ 1 ಸಾವಿರ ರೂಪಾಯಿ. ಒಂದು ಬಾರಿ ಗರಿಷ್ಠ 4 ಸಾವಿರ ರೂಪಾಯಿ ಕ್ಯಾಶ್‌ಬ್ಯಾಕ್‌ ಪಡೆಯಬಹುದಾಗಿದೆ.

ರೂಪೇ ಇಂಟರ್‌ನ್ಯಾಷನಲ್‌ ಕಾರ್ಡ್‌ಗಳ ಬಳಕೆದಾರರು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಲಾಂಜ್‌ಗಳ ಸೌಲಭ್ಯವನ್ನೂ ಪಡೆಯಬಹುದಾಗಿದೆ.

ಜೊತೆಗೆ ಥಾಮಸ್‌ ಕುಕ್‌ ಮತ್ತು ಮೇಕ್‌ ಮೈ ಟ್ರಿಪ್‌ ಮೂಲಕ ವಿಮಾನ ಮತ್ತು ಹೋಟೆಲ್‌ಗಳನ್ನು ರೂಪೇ ಕಾರ್ಡ್‌ಗಳನ್ನು ಬಳಸಿ ಬುಕ್ಕಿಂಗ್‌ ಮಾಡಿದರೆ ಆಗ ಒಳ್ಳೆಯ ಆಫರ್‌ ಸಿಗಲಿದೆ.

ರೂಪೇ ಡಿಸ್ಕವರ್‌ ಫೈನಾನ್ಶಿಯಲ್‌ ಸರ್ವಿಸ್‌ ಮತ್ತು ಜಪಾನ್‌ ಮೂಲದ ಜೆಸಿಬಿ ಇಂಟರ್‌ನ್ಯಾಷನಲ್‌ ಜೊತೆಗೂ ಸಹಭಾಗಿತ್ವ ಮಾಡಿಕೊಂಡಿದ್ದು, 190 ದೇಶಗಳಲ್ಲಿ ಅದರ ಲಾಭ ಪಡೆಯಬಹುದಾಗಿದೆ.

ಸದ್ಯಕ್ಕೆ 1,100 ಬ್ಯಾಂಕ್‌ಗಳಲ್ಲಿ ರೂಪೇ ಕಾರ್ಡ್‌ ಲಭ್ಯವಿದೆ.

 

LEAVE A REPLY

Please enter your comment!
Please enter your name here