ಒಂದು ಬಾರಿ ಸೋಲಿಸಿದ್ದೀನಿ, ಅಷ್ಟು ಸಾಕು..!

ಎಲ್ಲಾ ಪಕ್ಷಗಳ ನಾಯಕರು ನನ್ನನ್ನೇ ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರಿಗೆ ನನ್ನ ಮೇಲೆ ಭಯವೂ ಇರಬಹುದು ಅಥವಾ ನನ್ನನ್ನು ಭಯಪಡಿಸುವ ಉದ್ದೇಶವೂ ಇರಬಹುದು. ಇಂಥದ್ದನ್ನೆಲ್ಲ ನೋಡಿ, ಅನುಭವಿಸಿಯೇ ನಾನು ರಾಜಕಾರಣದಲ್ಲಿ ಇನ್ನೂ ಉಳಿದಿರುವುದು ಎಂದು ತಮ್ಮ ವಿರೋಧಿಗಳಿಗೆ ಗುಮ್ಮಿದ್ದಾರೆ.

ಶ್ರೀರಾಮುಲು ಕರ್ನಾಟಕದ ಮೋಸ್ಟ್ ಪಾಪ್ಯುಲರ್ ಲೀಡರ್, ಯಾರಿಗೆ ಬೇಕಾದರೂ ಚಾಲೆಂಜ್ ಮಾಡಬಲ್ಲರು, ಯಾರ ಎದುರು ಬೇಕಾದರೂ ತೊಡೆ ತಟ್ಟಬಲ್ಲರು. ನಾನು ಅವರಿಗೆ ಚಾಲೆಂಜ್ ಮಾಡುವಷ್ಟು ಪಾಪ್ಯುಲರ್ ನಾಯಕನಲ್ಲ. ಒಂದು ಬಾರಿ ಸೋಲಿಸಿದ್ದೀನಿ. ಅಷ್ಟು ಸಾಕು ಎಂದು ಮೈಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ನಿನ್ನೆ ಮೈಸೂರಲ್ಲಿ ಮಾತಾಡಿದ್ದ ಆರೋಗ್ಯ ಸಚಿವ ರಾಮುಲು ನಾನು ಇವತ್ತೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಸಿದ್ದರಾಮಯ್ಯನೂ ರಾಜೀನಾಮೆ ನೀಡಿ ನನ್ನ ಎದುರಿಗೆ ನಿಂತು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದರು.