ಐದನೇ ದಿನವೂ ಪೆಟ್ರೋಲ್‌ -ಡೀಸೆಲ್‌ ಬೆಲೆ ಏರಿಕೆ – ಲಾಕ್‌ಡೌನ್‌ ಹೊತ್ತಲ್ಲಿ ಗ್ರಾಹಕರಿಗೆ ಶಾಕ್‌

ಸತತ ಐದನೇ ದಿನವೂ ಪೆಟ್ರೋಲ್‌-ಡಿಸೇಲ್‌ ದರ ಏರಿಕೆ ಆಗಿದ್ದು ಮೂರು ರೂಪಾಯಿಯಷ್ಟು ದುಬಾರಿ ಆಗಿದೆ. ಇವತ್ತೂ ಪೆಟ್ರೋಲ್‌, ಡೀಸೆಲ್‌ ಬೆಲೆ ಲೀಟರ್‌ಗೆ 60 ಪೈಸೆಯಷ್ಟು ಹೆಚ್ಚಳವಾಗಿದೆ.

5 ದಿನಗಳಿಂದ ಪೆಟ್ರೋಲ್‌ 2 ರೂಪಾಯಿ 74 ಪೈಸೆಯಷ್ಟು, ಡೀಸೆಲ್‌ 2 ರೂಪಾಯಿ 83 ಪೈಸೆಯಷ್ಟು ದುಬಾರಿ ಆಗಿದೆ.

ಲಾಕ್‌ಡೌನ್‌ ಅವಧಿಯಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿತ್ತು. ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 10 ರೂಪಾಯಿ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 13 ರೂಪಾಯಿಯಷ್ಟು ಹೆಚ್ಚಳ ಮಾಡಿತ್ತು.

ಆದರೆ ಅಬಕಾರಿ ಸುಂಕವನ್ನು ತೈಲ ಕಂಪನಿಗಳು ಭರಿಸಬೇಕಿರುವ ಕಾರಣ ಗ್ರಾಹಕರಿಗೆ ಹೊರೆ ಆಗಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿತ್ತು. ಆದರೆ ಈಗ ತೈಲ ಕಂಪನಿಗಳು ತಮ್ಮ ಮೇಲಿನ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸ್ತಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಕೇಂದ್ರ ಸರ್ಕಾರ 50 ರೂಪಾಯಿಗಳಿಂತಲೂ ಅಧಿಕ ತೆರಿಗೆ ವಿಧಿಸುತ್ತಿದ್ದು ಇದು ಮೂಲ ಬೆಲೆಯ ಶೇಕಡಾ 275ಕ್ಕಿಂತಲೂ ಹೆಚ್ಚಾಗಿದೆ.

LEAVE A REPLY

Please enter your comment!
Please enter your name here