ಏಪ್ರಿಲ್ 20ರ ನಂತರ ಯಾವುದಕ್ಕೆಲ್ಲಾ ವಿನಾಯಿತಿ..?

ಕೇಂದ್ರ ಸರ್ಕಾರ ಏಪ್ರಿಲ್ 20ರ ಬಳಿಕ ಲಾಕ್‍ಡೌನ್-2ರಿಂದ ಕೆಲಸವೊಂದಕ್ಕೆ ವಿನಾಯಿತಿ ನೀಡಿ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

* ಕೊರೋನಾ ಹಾಟ್‍ಸ್ಪಾಟ್ ಅಲ್ಲದ ಪ್ರದೇಶಗಳಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಸಂಗ್ರಹಕ್ಕೆ ಅವಕಾಶ
* ಹಾಲು, ಹಾಲು ಉತ್ಪನ್ನಗಳು, ಕೋಳಿ ಸಾಗಣೆಗೆ ಅವಕಾಶ
* ಕಾಫಿ, ಟೀ, ರಬ್ಬರ್ ತೋಟಗಳಲ್ಲಿ ಕೃಷಿ ಕೆಲಸಕ್ಕೆ ಅವಕಾಶ
* ಜಲ ಸಂರಕ್ಷಣೆ, ನೀರಾವರಿ ಯೋಜನೆಗಳಲ್ಲಿ ನರೇಗಾ ಅಡಿ ಕಾಮಗಾರಿ
* ಐಟಿ ಹಾರ್ಡ್‍ವೇರ್, ಅಗತ್ಯ ವಸ್ತುಗಳ ಉತ್ಪಾದನೆ, ಪ್ಯಾಕೇಜಿಂಗ್ ಕಾರ್ಯ ಆರಂಭ
* ಆಕ್ವಾ ಉತ್ಪನ್ನಗಳ ಕ್ರಮ – ವಿಕ್ರಯಕ್ಕೆ ಅವಕಾಶ
* ಎಪಿಎಂಸಿ ಮಾರುಕಟ್ಟೆಗಳ ಪುನಾರಂಭ
* ಕೃಷಿ ಸಲಕರಣೆ, ಬಿಡಿಭಾಗಗಳ ಅಂಗಡಿ ತೆರೆಯಲು ಅವಕಾಶ
* ಬೀಜ, ರಸಗೊಬ್ಬರ, ಕ್ರಿಮಿನಾಶಕ ಅಂಗಡಿ ತೆರೆಯಬಹುದು
* ಈ- ಕಾಮರ್ಸ್ ಸಂಸ್ಥೆ, ವಾಹನಗಳಿಗೆ ಅನುಮತಿ
* ವಿವಾಹ ಮತ್ತು ಶುಭ ಕಾರ್ಯಕಗಳಿಗೆ ಡಿಸಿ ಅನುಮತಿ ಕಡ್ಡಾಯ
* ಎಲೆಕ್ಟ್ರಿಷಿಯನ್, ಐಟಿ ರಿಪೇರಿ, ಮೋಟಾರ್ ಮೆಕಾನಿಕ್, ಕಾರ್ಪೆಂಟರ್ ಸೇವೆಗಳಿಗೆ ಅನುಮತಿ
* ಗ್ರಾಮೀಣ ಪ್ರದೇಶದಲ್ಲಿ ರಸ್ತೆ, ನೀರಾವರಿ ಯೋಜನೆ ಕಾಮಗಾರಿಗಳಿಗೆ ಅವಕಾಶ
* ಕಟ್ಟಡ ನಿರ್ಮಾಣ ವಲಯಕ್ಕೆ ಷರತ್ತುಬದ್ಧ ಅನುಮತಿ
* ಐಟಿ ಸಂಸ್ಥೆಗಳು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೆಲಸ ಮಾಡಬಹುದು
* ಹೈವೇ ಪಕ್ಕದ ಡಾಬಾ, ವಾಹನ ಮಾರಾಟ ಮಳಿಗೆಗಳಿಗೆ ಅವಕಾಶ
* ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅವಕಾಶ

LEAVE A REPLY

Please enter your comment!
Please enter your name here