ಏಕ್​ ದೋ ತೀನ್‌ ಎನ್ನುತ್ತಾ 53 ಕ್ಕೆ ಕಾಲಿಟ್ಟ ಧಕ್‌ ಧಕ್‌ ಹುಡುಗಿ ಮಾಧುರಿ ದೀಕ್ಷಿತ್

ಏಕ್​ ದೋ ತೀನ್​… ಅಂತ ತನ್ನ ತಾಳಕ್ಕೆ ತಕ್ಕಂತೆ ಹುಡುಗರನ್ನು ಕುಣಿಸಿದ್ದ… ಧಕ್​ ಧಕ್​ ಕರ್​ನೇ ಲಗಾ… ಅಂತ ಪಡ್ಡೆಗಳ ಹೃದಯ ಬಡಿತ ಹೆಚ್ಚಿಸಿದ್ದ ನಟಿ ಮಾಧುರಿ ದೀಕ್ಷಿತ್​ ಶುಕ್ರವಾರ 53 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಮದುವೆಯಾದ ನಂತರ ಸಿನಿಮಾಗಳಿಂದ ಕೊಂಚ ದೂರ ಇದ್ದ ಅವರು ನಂತರ ಮತ್ತೆ ಭಾರತಕ್ಕೆ ಮರಳಿದ ನಂತರ ಮತ್ತೆ ಸಿನಿಮಾಗಳಲ್ಲಿ ಅಭಿನಯಿಸಲು ಆರಂಭಿಸಿದ್ದರು. ಇತ್ತೀಚೆಗೆ ಅವರ ಅಭಿನಯದ ಟೋಟಲ್​ ಧಮಾಲ್​ ಹಾಗೂ ಕಳಂಕ್​ ಸಿನಿಮಾಗಳು ತೆರೆಕಂಡಿದ್ದವು.

ಬಾಲಿವುಡ್​ನಲ್ಲಿ ತಮ್ಮ ಅಭಿನಯ ಹಾಗೂ ನೃತ್ಯದಿಂದ ಮನೆಮಾತಾಗಿದ್ದ ಮಾಧುರಿ ದೀಕ್ಷಿತ್‌ ಇದೀಗ ತಾನು ಹಾಡುವುದರಲ್ಲೂ ಸೈ ಎನಿಸಿಕೊಂಡಿದ್ದಾರೆ.

ಮಾಧುರಿ ಕೋವಿಡ್‌ ಪೀಡಿತರಿಗಾಗಿ ಹಣಕಾಸು ಸಂಗ್ರಹಿಸಲು ನಡೆಸಲಾದ “ಐ ಫಾರ್‌ ಇಂಡಿಯಾ” ಸಂಗೀತ ಕಛೇರಿಯಲ್ಲಿ ಭಾಗವಹಿಸಿದ್ದ ಅವರು “ಎಡ್‌ ಶೀರಾನ್”‌ ಅವರ “ಪರ್ಫೆಕ್ಟ್”‌ ಇಂಗ್ಲಿಷ್ ಹಾಡನ್ನು ಹಾಡುವುದರ ಮೂಲಕ ತಾನು ನಟನೆಗೂ ಸೈ ಇದೀಗಾ ಸಿಂಗಿಂಗ್‍ಗೂ ಜೈ ಎಂದಿದ್ದಾರೆ.

LEAVE A REPLY

Please enter your comment!
Please enter your name here