ಏಕಾದಶಿಯಂದು ಪಾಲಿಸಬೇಕಾದ ಏಳು ನಿಯಮಗಳು

ಸೂರ್ಯನು ಉತ್ತರಾಯಣ ಪುಣ್ಯಕಾಲಕ್ಕೆ ಪಥ ಬದಲಿಸುವ ಮುನ್ನ ಬರುವ ಶುದ್ಧ ಏಕಾದಶಿಯನ್ನು ವೈಕುಂಠ ಏಕಾದಶಿ ಅಂತಾ ಕರೆಯಲಾಗುತ್ತದೆ. ಮುಕ್ಕೋಟಿ ಏಕಾದಶಿ ದಿನವಾದ ಮಹಾವಿಷ್ಣು ಗರುಡವಾಹನದಲ್ಲಿ ಭೂಲೋಕಕ್ಕೆ ಬರುತ್ತಾರೆ. ಮಹಾವಿಷ್ಣುವನ್ನು ಪೂಜಿಸಲು ಮುಕ್ಕೋಟಿ ದೇವತೆಗಳು ಭೂಲೋಕಕ್ಕೆ ಬರುತ್ತಾರೆ. ಹೀಗಾಗಿ ಈ ಏಕಾದಶಿ ಮೂರು ಕೋಟಿ ಏಕಾದಶಿಗಳಿಗೆ ಸಮ ಎನ್ನಲಾಗುತ್ತದೆ. ಈ ದಿನವೇ ಹಾಲಹಲ ಮತ್ತು ಅಮೃತ ಹುಟ್ಟಿತೆಂದು ಹೇಳುತ್ತೆ ಪುರಾಣ.

ಏಕಾದಶಿಯಂದು ಉಪವಾಸವಿದ್ದು, ದ್ವಾದಶಿಯಂದು ಅನ್ನದಾನ ಮಾಡಿದರೇ ಒಳ್ಳೆಯದಾಗುತ್ತದೆ ಎಂಬುದು ನಂಬಿಕೆ. ಪೂಜೆ, ಜಪ, ಧ್ಯಾನದಿಂದ ಭಕ್ತನು ಮಾಧವನೊಂದಿಗೆ ಅನುಸಂಧಾನವಾಗಬೇಕು.

ಏಕಾದಶಿಯಂದು ಕೈಗೊಳ್ಳುವ ವ್ರತಕ್ಕೆ ಏಳು ನಿಯಮಗಳಿವೆ.
* ನಿಯಮ 1 – ದಶಮಿಯ ರಾತ್ರಿಯಂದು ಯಾವುದೇ ಆಹಾರ ಸ್ವೀಕರಿಸಬಾರದು
* ನಿಯಮ 2 – ಏಕಾದಶಿಯಂದು ದಿನವಿಡೀ ಉಪವಾಸ ಇರಬೇಕು
* ನಿಯಮ 3 – ಸುಳ್ಳು ಹೇಳಬಾರದು
* ನಿಯಮ 4 – ಸ್ತ್ರೀ ಸಾಂಗತ್ಯ ಮಾಡಬಾರದು
* ನಿಯಮ 5 – ಕೆಟ್ಟ ಕೆಲಸ, ದುಷ್ಟ ಆಲೋಚನೆ ಮಾಡಬಾರದು
* ನಿಯಮ 6 – ಮುಕ್ಕೋಟಿ ಏಕಾದಶಿಯಂದು ರಾತ್ರಿಯಿಡಿ ಜಾಗರಣೆ ಮಾಡಬೇಕು
* ನಿಯಮ 7 – ಅನ್ನದಾನ ಮಾಡಬೇಕು

ಈ ನಿಯಮಗಳನ್ನು ಅನುಸರಿಸಿದಲ್ಲಿ ಮಹಾವಿಷ್ಣುವಿನ ಕೃಪೆಗೆ ಪಾತ್ರರಾಗುತ್ತೀರಿ ಎಂದು ಹೇಳುತ್ತದೆ ಆಗಮಿಕ ಶಾಸ್ತ್ರ

LEAVE A REPLY

Please enter your comment!
Please enter your name here