ಎಸ್.ಪಿ ಕಾರಿನಲ್ಲಿ ಠಾಣೆಗೆ ಬಂದ ದೂರುದಾರ : ಎಸ್​.ಐಗೆ ಶಾಕ್

ದೂರುದಾರನನ್ನು ತಮ್ಮದೇ ಕಾರಿನಲ್ಲಿ ಪೊಲೀಸ್ ಠಾಣೆಗೆ ಕಳುಹಿಸಿ ತುಮಕೂರು ಎಸ್​.ಪಿ ರಾಹುಲ್ ಕುಮಾರ್ ಅವರು ಎಸ್​.ಐ ಗೆ ಶಾಕ್ ನೀಡಿದ್ದಾರೆ.

ದಂಡಿನಶಿವರ ಪೊಲೀಸ್ ಠಾಣೆಯ ಕೋಡಿಗೆಹಳ್ಳಿಯಲ್ಲಿ ನಾಗೇಂದ್ರಪ್ಪ ಮತ್ತು ಶಿವಪ್ರಕಾಶ್ ನಡುವೆ ಗಲಾಟೆ ನಡೆದಿತ್ತು. ನಾಗೇಂದ್ರಪ್ಪ ಎಂಬವರ ಮೇಲೆ ಶಿವಕುಮಾರ್‌, ಚಂದನ್‌ ಮಾರಣಾಂತಿಕ ಹಲ್ಲೆ ನಡೆಸಿದ್ದರು. ದಂಡಿನಶಿವರ ಠಾಣೆಗೆ ನಾಗೇಂದ್ರಪ್ಪ ದೂರು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡರೂ ಆರೋಪಿಗಳನ್ನು ಎಸ್‌.ಐ ಶಿವಲಿಂಗಯ್ಯ ಬಂಧಿಸಿರಲಿಲ್ಲ. ಆರೋಪಿಗಳನ್ನು ಬಂಧಿಸುವಂತೆ ಎಸ್‌.ಐಗೆ ನಾಗೇಂದ್ರಪ್ಪ ಮನವಿ ಮಾಡಿದ್ದ. ಆದರೆ, ದೂರುದಾರ ನಾಗೇಂದ್ರಪ್ಪ ಅವರಿಗೆ ಆರೋಪಿಯನ್ನ ಹಿಡಿಯಲು ಹೋಗೋಣ ಕಾರು ಬಾಡಿಗೆ ಮಾಡಿಕೊಂಡು ಬಾ ಎಂದು ಎಸ್‌.ಐ ಹೇಳಿದ್ದರು.

ಎಸ್‌.ಐ ಮಾತಿನಿಂದ ನೊಂದು ನಾಗೇಂದ್ರಪ್ಪ ತುಮಕೂರಿಗೆ ಬಂದು ಎಸ್.ಪಿಗೆ ದೂರು ನೀಡಿದ್ದಾರೆ. ದೂರು ಆಲಿಸಿದ ಎಸ್‌.ಪಿ ತಮ್ಮದೆ ಕಾರಿನಲ್ಲಿ ದೂರುದಾರರನ್ನ ಠಾಣೆಗೆ ಕಳುಹಿಸಿದ್ದಾರೆ. ಮೇಲಾಧಿಕಾರಿಯ ಕಾರು ನೋಡಿ ಪೊಲೀಸರು ನಡುಗಿ ಹೋಗಿದ್ದಾರೆ. ದೂರುದಾರನನ್ನು ತಮ್ಮದೆ ಕಾರಿನಲ್ಲಿ ಕಳುಹಿಸಿ ಎಸ್‌ಐಗೆ ಎಸ್ಪಿ ರಾಹುಲ್ ಕುಮಾರ್ ಶಹಾಪೂರ್​​ ಶಾಕ್‌ ಕೊಟ್ಟಿದ್ದಾರೆ. ಎಸ್ಪಿಯವ ಈ ವಿಭಿನ್ನ ನಡೆ ತುಮಕೂರು ಪೊಲೀಸರಿಗೆ ಮಾದರಿಯಾಗಿದೆ.

LEAVE A REPLY

Please enter your comment!
Please enter your name here