ಎಷ್ಟು ದಿನ ಅಂತ ದುಡಿಯೋದು, ಅದಕ್ಕೊಂದು ಲಿಮಿಟ್‌ ಇಲ್ವಾ..? – ಕಾಂಗ್ರೆಸ್‌ ನಾಯಕನ ಗುಡುಗು

ಕಾಂಗ್ರೆಸ್‌ ಅಲ್ಪಸಂಖ್ಯಾತರ ಕೈ ಹಿಡಿದಿಲ್ಲ ಎಂದು ಎಂಎಲ್‌ಸಿ ಸಿ ಇಬ್ರಾಹಿಂ ಕಾಂಗ್ರೆಸ್‌ ಹೈಕಮಾಂಡ್‌ ವಿರುದ್ಧ ಕಿಡಿಕಾರಿದ್ದಾರೆ. ಪಕ್ಷ ಬಿಟ್ಟು ನಾವೆಲ್ಲಿ ಹೋಗಿದ್ದೇವೆ..? ಆದರೆ ಎಷ್ಟು ದಿನ ಅಂತ ದುಡಿಯೋದು. ಅದಕ್ಕೊಂದು ಲಿಮಿಟ್‌ ಇಲ್ವಾ..? ಎಂದು ಗುಡುಗಿದ್ದಾರೆ.

ನಾನು ಮೊದಲೇ ರಿಸಲ್ಟ್‌ ಬರಲ್ಲ ಎಂದು ಹೇಳಿದ್ದೆ. ನಾನು ಹೇಳಿದಂತೆ ಆಗಿದೆ. ವೀರಶೈವ ಸಮಾಜದ ಜೊತೆಗೆ ಒಕ್ಕಲಿಗ ಸಮುದಾಯವೂ ಈ ಬಾರಿ ಯಡಿಯೂರಪ್ಪ ಕೈ ಹಿಡಿದಿದೆ. ಯಡಿಯೂರಪ್ಪ ಇಲ್ಲದೇ ಬಿಜೆಪಿ ಇಲ್ಲ. ಜೆಡಿಎಸ್‌ನವರಿಗೆ ಒಕ್ಕಲಿಗರ ಶಕ್ತಿ ಇತ್ತು. ಆದರೆ ಉಪ ಚುನಾವಣೆಯಲ್ಲಿ ಕೈ ಹಿಡಿಯಲಿಲ್ಲ. ಸತ್ಯಾಂಶ ಹೇಳುವುದಕ್ಕೆ ನಮ್ಮಲ್ಲಿ ಯಾರೂ ತಯಾರಿಲ್ಲ ಎಂದು ಸಿ ಎಂ ಇಬ್ರಾಹಿಂ ಸಿಟ್ಟು ಹೊರಹಾಕಿದ್ದಾರೆ.

ನಾವು ದುಡಿದು ವೋಟ್‌ ಹಾಕಿಸ್ಬೇಕು. ಆದರೆ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮನ್ನು ಕೇಳುವುದೇ ಇಲ್ಲ. ವಿಧಾನ ಪರಿಷತ್‌ನಲ್ಲಿ ಅತ್ಯಂತ ಹಿರಿಯ ಕಾಂಗ್ರೆಸ್‌ ಸದಸ್ಯ ಯಾರು..? ಪರಿಷತ್‌ನಲ್ಲಿ ಯಾರು ವಿಪಕ್ಷ ನಾಯಕ ಆಗ್ಬೇಕಿತ್ತು..? ಷೇರು ಹೂಡಿಕೆ ಮಾಡಿದವರಿಗೆ ಷೇರು ಪ್ರಮಾಣಪತ್ರ ಕೊಡಲ್ಲ ಅಂದ್ರೆ ಹೇಗೆ ಅಂತ ಕಾಂಗ್ರೆಸ್‌ ಹೈಕಮಾಂಡ್‌ನ್ನೇ ಪ್ರಶ್ನಿಸಿದ್ದಾರೆ.

ವಿರೋಧ ಮಾಡುವುದು ನಾವು, ಭಾಷಣ ಮಾಡುವುದು ನಾವು, ವಿರೋಧ ಕಟ್ಟಿಕೊಳ್ಳುವುದು ನಾವು. ಅಧಿಕಾರ ಅನುಭವಿಸುವುದಕ್ಕೆ, ಕುಚಿ ಮೇಲೆ ಕೂರುವುದಕ್ಕೆ ಬೇರೆಯವರಾ..? ಪಕ್ಷದ ಉಸ್ತುವಾರಿ ವೇಣುಗೋಪಾಲ್‌ ನಮ್ಮ ಪರವಾಗಿ ಮಾತನಾಡಬೇಕಿತ್ತು. ಆದರೆ ಕಾಂಗ್ರೆಸ್‌ ನಾಯಕರು ಯಾರೂ ಮಾತಾಡಲೇ ಇಲ್ಲ.

ವಿರೋಧ ಮಾಡೋದು ನಾವು, ಭಾಷಣ ಮಾಡೋದು ನಾವು, ವಿರೋಧ ಕಟ್ಕೊಳ್ಳೋದು ನಾವು, ಅಧಿಕಾರ ಅನುಭವಿಸೋದಕ್ಕೆ ಕುರ್ಚಿ ಮೇಲೆ ಕೂರುವುದಕ್ಕೆ ಬೇರೆಯವರಾ…? ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಶೇಕಡಾ ೧೫ರಷ್ಟಿದೆ. ಆದರೆ ಈ ಬಾರಿ ಅವರೂ ಯಡಿಯೂರಪ್ಪ ಜೊತೆ ಗುರುತಿಸಿಕೊಂಡಿದ್ದಾರೆ. ಹಳೆ ಮೈಸೂರ ಭಾಗದಲ್ಲೂ ಏನಾಗಿದೆ ನೋಡಬಹುದು ಎಂದು ಇಬ್ರಾಹಿಂ ತಮ್ಮ ಅಸಮಾಧಾನ ಸ್ಫೋಟಿಸಿದ್ದಾರೆ.

ನನಗೆ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಬಗ್ಗೆ ಸಿಟ್ಟಿಲ್ಲ. ನನ್ನ ಸಿಟ್ಟು ಇರುವುದು ಕಾಂಗ್ರೆಸ್‌ ಪಕ್ಷದ ಬಗ್ಗೆ. ಸತ್ತಿದ್ದೀವಿ ಎಂದ ಮೇಲೆ ಶವಸಂಸ್ಕಾರನಾದ್ರೂ ಮಾಡಬೇಕಲ್ಲ, ಅದು ಬಿಟ್ಟು ಸರ್ಕಲ್‌ನಲ್ಲಿ ಬಿಸಾಡಿ ಹೋದ್ರೆ ಹೇಗೆ..? ಅದಕ್ಕಿಂತ ಮನೆಯ ಸಾವೇ ಉತ್ತಮ ಅನ್ನಿಸುತ್ತದೆ. ಕಾಂಗ್ರೆಸ್‌ ಕಾರ್ಯಕರ್ತರಾಗಿದ್ದುಕೊಂಡು ಎಲೆಕ್ಷನ್‌ ಟೈಂನಲ್ಲಿ ಒಂದು ವೋಟ್‌ ಒತ್ತುತ್ತೇವೆ, ಅಷ್ಟು ಸಾಕು ಎಂದು ಸಿ ಎಂ ಇಬ್ರಾಹಿಂ ತಮ್ಮ ಆಕ್ರೋಶವನ್ನೆಲ್ಲ ಹೊರಹಾಕಿದ್ದಾರೆ.

LEAVE A REPLY

Please enter your comment!
Please enter your name here