ಎಲ್‌ಕೆಜಿ,ಯುಕೆಜಿ ಮಕ್ಕಳಿಗೆ ಆನ್ ಲೈನ್‌ ಶಿಕ್ಷಣ ಸರಿಯಲ್ಲ-ಸಚಿವ ಸುರೇಶ್‌ ಕುಮಾರ್

ದೇಶಾದ್ಯಂತ ಲಾಕ್‌ ಡೌನ್‌ ಜಾರಿಯಲ್ಲಿರುವ ಹಿನ್ನಲೆಯಲ್ಲಿ ರಾಜ್ಯದ ಕೆಲವು ಶಾಲೆಗಳಲ್ಲಿ ಆನ್‌ ಲೈನ್‌ ತರಗತಿಗಳನ್ನು ಪ್ರಾರಂಭಿಸುವ ಮೂಲಕ ಕೆಲವೊಂದು ಸಂಸ್ಥೆಗಳು ಪೋಷಕರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂದು ಕೇಳಿ ಬರುತ್ತಿದೆ.

ಇಂತಹ ಕ್ರಮ ಸರಿಯಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಸುರೇಶ್‌ ಕುಮಾರ್‌ ಎಚ್ಚರಿಸಿದ್ದಾರೆ. ಅದರಲ್ಲೂ ಕೆಲವು      ಶಾಲೆಗಳು ಎಲ್ ಕೆ ಜಿ, ಯುಕೆಜಿ ಮಕ್ಕಳಿಗೆ ಆನ್ ಲೈನ್ ತರಗತಿ ನಡೆಸಲು ಮುಂದಾಗಿದ್ದು ಆ ವಯಸ್ಸಿನ ಮಕ್ಕಳಿಗೆ ಆನ್ ಲೈನ್ ತರಗತಿ ಎಂಬುದು ಹಾಸ್ಯಾಸ್ಪದ ಮತ್ತು ಈ ವಯಸ್ಸಿನ ಮಕ್ಕಳು ಆಟದ ಮೂಲಕ ಕಲಿಯುತ್ತಾರೆ. ಆನ್ ಲೈನ್ ನಲ್ಲಿ ತರಗತಿ ನಡೆಸುವುದು ಸರಿಯಲ್ಲ ಎಂದಿದ್ದಾರೆ.

ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಹೊರೆಯಾಗದ ರೀತಿಯಲ್ಲಿ ಆನ್‌ ಲೈನ್‌ ತರಗತಿ ನಡೆಸಲು ಶಿಕ್ಷಣ ಸಂಸ್ಥೆಗಳಿಗೆ ಅನುಮತಿ ನೀಡಿದ್ದು ಇದೀಗ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೂ ಕೂಡಾ ಆನ್‌ ಲೈನ್‌ ತರಗತಿ ನೀಡುತ್ತೇವೆ ಎಂದು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಶೋಷಿಸುತ್ತಿದೆ.

ಆ ವಯಸ್ಸಿನಲ್ಲಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಸರಿಯಲ್ಲ. ಎಲ್ಲಾ ಪೋಷಕರು ಕಂಪ್ಯೂಟರ್ ಖರೀದಿಸಲು ಆಗುತ್ತಾ, ಅಥವಾ ಮಕ್ಕಳು ಮೊಬೈಲ್ ಮುಂದೆ ಕುಳಿತುಕೊಂಡು ಕಲಿಯುತ್ತಾರಾ. ಇದೊಂದು ಕ್ರೂರ ಪದ್ದತಿ, ಇದೊಂದು ಹಿಂಸೆ ಎಂದಿದ್ದಾರೆ.

ಇಂತಹ ಅವೈಜ್ಞಾನಿಕ ಅಕ್ರಮಗಳಿಗೆ  ಕಡಿವಾಣ ಹಾಕುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here