ಎಲ್‌ಐಸಿ ಪ್ರೀಮಿಯಂ ಪಾವತಿಗೆ 30 ದಿನಗಳ ವಿನಾಯಿತಿ

ಎಲ್‌ಐಸಿ ಪ್ರೀಮಿಯಂ ಪಾವತಿಗೆ ಒಂದು ತಿಂಗಳ ವಿನಾಯಿತಿ ನೀಡಲಾಗಿದೆ. ಈ ಸಂಬಂಧ ಭಾರತೀಯ ಜೀವ ವಿಮಾ ನಿಗಮ ಅಧಿಕೃತ ಘೋಷಣೆ ಹೊರಡಿಸಿದೆ.

ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳ ಪ್ರೀಮಿಯಂ ಪಾವತಿ ಕಟ್ಟುವುದಕ್ಕೆ 30 ದಿನಗಳ ವಿನಾಯಿತಿಯನ್ನು ಘೋಷಿಸಲಾಗಿದೆ. ಅಂದರೆ ಈ ಎರಡೂ ತಿಂಗಳ ಪ್ರೀಮಿಯಂ ಮೇ ತಿಂಗಳಲ್ಲಿ ಪಾವತಿಸಬಹುದು.

ಇನ್ನು ಫೆಬ್ರವರಿಯಲ್ಲಿ ಪ್ರೀಮಿಯಂ ಬಾಕಿ ಉಳಿಸಿಕೊಂಡ ಪಾಲಿಸಿದಾರರು ಏಪ್ರಿಲ್‌ 15ರೊಳಗೆ ಪ್ರೀಮಿಯಂ ಪಾವತಿಸಬಹುದಾಗಿದೆ. ಫೆಬ್ರವರಿ ತಿಂಗಳ ಪ್ರೀಮಿಯಂ ಪಾವತಿಗೆ ಮಾರ್ಚ್‌ 22ರವರೆಗೆ ಸಮಯ ಇತ್ತು.

ಉತ್ತಮ ಆರೋಗ್ಯದ ದಾಖಲೆಯನ್ನೂ ನೀಡದೆಯೇ ಪಾಲಿಸಿ ನವೀಕರಣಕ್ಕೂ ಎಲ್‌ಐಸಿ ಅವಕಾಶ ನೀಡಿದೆ.

ಪಾಲಿಸಿದಾರರು ತಮ್ಮ ಪ್ರೀಮಿಯಂ ಮೊತ್ತವನ್ನು ಆನ್‌ಲೈನ್‌ ಮೂಲಕವೂ ಪಾವತಿಸಬಹುದಾಗಿದ್ದು, ಸೇವಾ ಶುಲ್ಕ ಇರುವುದಿಲ್ಲ. ಅಲ್ಲದೇ ಪ್ರೀಮಿಯಂ ಪಾವತಿಗೆ ಆನ್‌ಲೈನ್‌ನಲ್ಲಿ ರಿಜಿಸ್ಟ್ರರ್‌ ಆಗುವ ಅಗತ್ಯವಿಲ್ಲ. ನೇರವಾಗಿ ಪ್ರೀಮಿಯಂ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಅಲ್ಲದೇ ನೆಟ್‌ಬ್ಯಾಕಿಂಗ್‌, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಫೋನ್‌ ಪೇ, ಪೇಟಿಎಂ, ಭೀಮ್‌ ಆಪ್‌ ಮೂಲಕವೂ ಪ್ರೀಮಿಯಂ ಪಾವತಿಸಬಹುದು.

LEAVE A REPLY

Please enter your comment!
Please enter your name here