ಇನ್ನೆರಡು ಅಥವಾ ಮೂರು ದಿನಗಳಲ್ಲಿ ರಾಜ್ಯದಲ್ಲಿ ಖಾಸಾಗಿ ಬಸ್ ಸಂಚಾರ ಆರಂಭವಾಗಲಿದ್ದು, ಶೇ. 15 ರಷ್ಟು ದರ ಏರಿಕೆಗೆ ಅವಕಾಶ ಅವಕಾಶ ನೀಡಲಾಗಿದೆ ಎಂದು ಶುಕ್ರವಾರ ರಾಯಚೂರಿನಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.
ಲಾಕ್ಡೌನ್ ಕಾರಣದಿಂದಾಗಿ ಕಳೆದ ಎರಡು ತಿಂಗಳಿನಿಂದ ರಾಜ್ಯಾದ್ಯಂತ ಸರ್ಕಾರಿ ಮತ್ತು ಖಾಸಗಿ ಸಾರಿಗೆ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ, ಇದೀಗ ಹಂತ ಹಂತವಾಗಿ ಸರ್ಕಾರಿ ರಸ್ತೆ ಸಾರಿಗೆ ಸೇವೆ ಆರಂಭಿಸಿದೆ.
ಖಾಸಗಿ ಸಾರಿಗೆಯನ್ನು ಆರಂಭಿಸುವ ಕುರಿತು ಮಾಲೀಕರ ಜೊತೆಗೆ ಮಾತುಕತೆ ನಡೆಸಲಾಗಿದೆ. ಆದರೆ, ಖಾಸಗಿ ಸಾರಿಗೆ ಸಂಸ್ಥೆಯ ಮಾಲೀಕರು ಟಿಕೆಟ್ ದರವನ್ನು ಶೇ.50 ರಷ್ಟು ಹೆಚ್ಚಿಸಿ ಬಸ್ ಓಡಿಸಲು ಅನುಮತಿ ಕೇಳಿದ್ದರು. ಆದರೆ ನಾವು ಶೇ. 15 ರಷ್ಟು ದರ ಹೆಚ್ಚಿಸಿ ಬಸ್ ಓಡಿಸಲು ಅನುಮತಿ ನೀಡಿದ್ದೇವೆ.
ಸೋಂಕು ತಡೆಯಲು ಕೆಎಸ್ ಆರ್ಟಿಸಿ ಮತ್ತು ಬಿಎಂಟಿಸಿ ಬಸ್ ಗಳಲ್ಲಿ ಅನುಸರಿಸಲಾಗುತ್ತಿರುವ ಎಲ್ಲಾ ನಿಯಮಗಳನ್ನು ಖಾಸಾಗಿ ಬಸ್ಗಳಲ್ಲಿಯೂ ಅನುಸರಿಸಬೇಕು ರೆಡ್ ಝೋನ್ ಮತ್ತು ಬಫರ್ ಝೋನ್ ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯದಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.