ಎಚ್‌ ವಿಶ್ವನಾಥ್‌ಗೆ ಪರಿಷತ್‌ ಸದಸ್ಯ ಸ್ಥಾನ ನೀಡುವುದು ಸುಲಭವಲ್ಲ – ಸಂಸದ ಶ್ರೀನಿವಾಸ್‌ಪ್ರಸಾದ್‌

ವಿಧಾನಪರಿಷತ್‌ ಚುನಾವಣೆಗೆ ಕಾವು ಏರುತ್ತಿರುವ ಬೆನ್ನಲ್ಲೇ ಇವತ್ತು ಒಂದು ಕಾಲದಲ್ಲಿ ಅತೃಪ್ತ ಶಾಸಕರ ಗುಂಪಿನ ನಾಯಕರಾಗಿದ್ದ ಈಗಿನ ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಇವತ್ತು ಮಾಜಿ ಸಚಿವ ಎಚ್‌ ವಿಶ್ವನಾಥ್‌ ಮತ್ತು ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್‌ ಪ್ರಸಾದ್‌ರನ್ನು ಭೇಟಿ ಆದರು.

ಪರಿಷತ್‌ಗೆ ವಿಶ್ವನಾಥ್‌ಗೆ ಸ್ಥಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟ ನಿರ್ಧಾರ ಎಂಬ ಹೇಳಿಕೆ ಕೊಟ್ಟ ಕೆಲವೇ ಗಂಟೆಗಳಲ್ಲಿ ಜಾರಕಿಹೊಳಿ ಭೇಟಿ ನಡೆದಿದೆ.

ಭೇಟಿ ಬಳಿಕ ಮಾತಾಡಿದ ಸಂಸದ ಶ್ರೀನಿವಾಸ್‌ ಪ್ರಸಾದ್‌ ವಿಶ್ವನಾಥ್‌ಗೆ ಪರಿಷತ್‌ ಸದಸ್ಯರನ್ನಾಗಿ ಮಾಡುವುದು ಸುಲಭವಲ್ಲ ಎನ್ನುವ ಮೂಲಕ ವಿಶ್ವನಾಥ್‌ ಅವರ ಭವಿಷ್ಯದ ರಾಜಕೀಯ ಸ್ಥಿತಿ ಏನಿರಲಿದೆ ಎಂಬ ಪರೋಕ್ಷ ಸುಳಿವು ನೀಡಿದ್ದಾರೆ.

ಪರಿಷತ್‌ನಲ್ಲಿ ವಿಶ್ವನಾಥ್‌ಗೆ ಸ್ಥಾನ ನೀಡಬೇಕು ಎಂಬ ಬಗ್ಗೆ ನಾನು ಸಿಎಂ ಯಡಿಯೂರಪ್ಪಗೆ ಮನವಿ ಮಾಡಿದ್ದೇನೆ. ಎಲ್ಲಾ ಶಾಸಕರು ವಿಶ್ವನಾಥ್‌ ಪರ ಇದ್ದಾರೆ. ರಮೇಶ್‌ ಜಾರಕಿಹೊಳಿ ಕೂಡಾ ನಮ್ಮ ಪರ ಇದ್ದಾರೆ. ವಿಶ್ವನಾಥ್‌ಗೆ ಪರಿಷತ್‌ ಸ್ಥಾನ ನೀಡುವ ಬೇಡಿಕೆ ನಮ್ಮದು. ಸರ್ಕಾರದಲ್ಲಿ ಇಂತಹ ರಾಜಕಾರಣಿಯ ಅವಶ್ಯಕತೆ ಇದೆ ಎಂದು ಸಂಸದ ಶ್ರೀನಿವಾಸ್‌ ಪ್ರಸಾದ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here