ಎಂದೂ ನನಸಾಗದ ಸುಂದರ ಕನಸು; ಆತ್ಮನಿರ್ಭರ

ಯಾರಿಗಾದ್ರೂ ನೆನಪಿದೆಯಾ ? ವಿಶ್ವ ಗುರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿ ಒಂದು ತಿಂಗಳಾಯ್ತು…!!!ನಿಮಗೆ ಅಥವಾ ನಿಮ್ಮ ಪರಿಚಯದ ಯಾರಿಗಾದರೂ ಆತ್ಮ ನಿರ್ಭರ ಪ್ಯಾಕೇಜ್ ನ ಲಾಭ ದೊರಕಿದೆಯಾ…???

ಲಾಕ್ ಡೌನ್ ಸಮಯದಲ್ಲಿ ದಾರುಣವಾಗಿ ರೈಲಿನಡಿಗೆ ಬಿದ್ದವರು, ನೀರು-ಆಹಾರ ಸಿಗದೇ ಜೀವ ಬಿಟ್ಟವರು, ಕಾಲ್ನಡಿಗೆಯಲ್ಲಿ ತಮ್ಮ ಊರು ತೆರಳುವ ದಾರಿ ಮಧ್ಯೆ ಉಸಿರು ನಿಲ್ಲಿಸಿದ ವಲಸೆ ಕಾರ್ಮಿಕರು, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೇ ಪ್ರಾಣ ಬಿಟ್ಟವರು, ಪೋಲೀಸರ ಮತ್ತು ಸ್ವಘೋಷಿತ ಕೋಮುವಾದಿಗಳ ಕೈಯಲ್ಲಿ ಕೊಲೆಯಾದವರು, ಹಸಿವು ತಾಳದೇ ಆತ್ಯಹತ್ಯೆಗೈದವರು. ಹೀಗೆ ಪಟ್ಟಿ ಬೆಳೆದು 700ರ ದಾಟಿದೆ.

ದಿನನಿತ್ಯ ಇಷ್ಟೆಲ್ಲಾ ಅಹಿತಕರ ಘಟನೆಗಳು ನಡೆಯುತ್ತಿದ್ರೂ ಭಕ್ತರ ದೊಂಬರಾಟ ಮಾತ್ರ ದಿನೇ ದಿನೇ ಹೆಚ್ಚಾಗುತ್ತಿವೆ. ಸರಕಾರ ಆತ್ಮ ನಿರ್ಭರ ಎಂಬ ಎಂದೆಂದೂ ಕಾರ್ಯರೂಪಕ್ಕೆ ಬರದ ಒಂದು ನಕಲಿ ಪ್ಯಾಕೇಜನ್ನು ತೋರಿಸಿ ಮುಗ್ಧ ಜನರನ್ನು ಮರುಳು ಮಾಡುತ್ತಿದೆ. ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ಅಧಃಪತನಕ್ಕೆ ಜಾರುತ್ತಿದೆ. ಇದನ್ನೆಲ್ಲಾ ಪ್ರಶ್ನಿಸಬೇಕಾದ ಮಾಧ್ಯಮ ವರ್ಗವು ದುಡ್ಡಿನ ಆಸೆಗೆ ಹಸಿ ಹಸಿ ಸುಳ್ಳು ಭಿತ್ತರಿಸಿ ಜನರ ಮಧ್ಯೆ ಸಂಘರ್ಷ ಸೃಷ್ಟಿಸುತ್ತಿದೆ…

-ನವಾಝ್ ಮದ್ಪಾಡಿ

LEAVE A REPLY

Please enter your comment!
Please enter your name here