ಉಳಿದ ಶಾವಿಗೆ ಉಪ್ಪಿಟ್ಟು ಚೆಲ್ಲೋ ಮೊದಲು ಇದನ್ನು ಓದಿ…

ಸತ್ಯಸಾಕ್ಷಿ ತುಮರಿ

ಬೆಳಗ್ಗೆ ಮಾಡಿದ ಶಾವಿಗೆ ಉಪ್ಪಿಟ್ಟು ಉಳಿದು ಬಿಟ್ಟಿತ್ತು. ಏನು ಮಾಡೋದು ಗೊತ್ತಾಗಲಿಲ್ಲ. ಲಾಕ್ ಡೌನ್ ಪರಿಣಾಮ ಜನರು ಎದುರಿಸುತ್ತಿರುವ ಆಹಾರ ಸಮಸ್ಯೆ ಉಪ್ಪಿಟ್ಟನ್ನು ಕಸದ ಬುಟ್ಟಿ ಸೇರಿಸಲು ಮನಸ್ಸು ಒಪ್ಪಲಿಲ್ಲ. ಅದಕ್ಕೆ ಶಾವಿಗೆ ಉಪ್ಪಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಕಾರ್ನ್ ಫ್ಲೋರ್,ರುಚಿಗೆ ತಕ್ಕಷ್ಟು ಕಾರದ ಪುಡಿ ಸೇರಿಸಿ ದೋಸೆ ಕಾವಲಿಗೆ ಎಣ್ಣೆ ಸವರಿ ಎರಡೂ ಬದಿಗೂ ಚೆನ್ನಾಗಿ ಬೇಯಿಸಿದೆ… ಶಾವಿಗೆ ಉಪ್ಪಿಟ್ಟು ಖಾಲಿ, ಸಂಜೆಯ ಚಹಾದ ಸಮಯಕ್ಕೆ ಬಾಯಿ ಚಪ್ಪರಿಸಲು ಒಂದು ತಿಂಡಿಯೂ ರೆಡಿ….. ಹೇಗಿದೆ ಅಲ್ವ? ಚೆಲ್ಲುವ ಆಹಾರವನ್ನ ಈ ರೀತಿ ಉಪಯೋಗಿಸಿಕೊಂಡರೆ ಒಳಿತಲ್ಲವೇ?

ಬೇಕಾಗುವ ಸಾಮಗ್ರಿಗಳು
ಉಳಿದ ಶಾವಿಗೆ ಉಪ್ಪಿಟ್ಟು
ಕಡಲೆ ಹಿಟ್ಟು 2-3ಚಮಚ
ಕಾರ್ನ್ ಫ್ಲೋರ್ ಇದ್ದರೆ ಹಾಕಬಹುದು 1ಚಮಚ
ಅಕ್ಕಿ ಹಿಟ್ಟು 2 ಚಮಚ
ಅಚ್ಚಕಾರದ ಪುಡಿ ರುಚಿಗೆ ತಕ್ಕಷ್ಟು.
ಕೊತ್ತಂಬರಿ ಸೊಪ್ಪು ಸ್ವಲ್ಪ,
ಎಣ್ಣೆ ಬೇಯಿಸಲು.

ವಿಧಾನ:

ಮೊದಲಿಗೆ ಒಂದು ಪಾತ್ರೆಗೆ ಉಳಿದ ಶಾವಿಗೆ ಉಪ್ಪಿಟ್ಟು ಹಾಕಿ, ಅದಕ್ಕೆ ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಂತರ ದೋಸೆ ಕಾವಲಿಗೆ ಎಣ್ಣೆ ಸವರಿ ದೋಸೆಯ ರೀತಿ ಸಣ್ಣದಾಗಿ ಹರಡಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ. ಮಂದ ಉರಿಯಲ್ಲಿ ನಿಧಾನವಾಗಿ ಬೇಯಿಸಿದರೆ ಚೆನ್ನಾಗಿರುತ್ತದೆ. ಇದು ಚಟ್ನಿ ಜೊತೆ ಸವಿಯಲು ರುಚಿಯಾಗಿರುತ್ತದೆ

LEAVE A REPLY

Please enter your comment!
Please enter your name here