ಉಡುಪಿ-ಮಂಗಳೂರು ನಡುವೆ ಓಡಾಟಕ್ಕೆ ಕಂಪೆನಿ ಕೆಲಸ ಬಿಟ್ಟು ಉಳಿದವರಿಗೆ ಪಾಸ್‌ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ

ಬೆಂಗಳೂರು- ರಾಮನಗರ ಮಾದರಿಯಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯನ್ನು ರಾಜ್ಯ ಸರ್ಕಾರ ಒಂದೇ ಘಟಕವನ್ನಾಗಿ ಪರಿಗಣಿಸಿ ಆದೇಶ ಹೊರಡಿಸಿರುವುದರಿಂದ ಖಾಸಗಿ ಕಂಪೆನಿ ಮತ್ತು ಸಂಸ್ಥೆಗಳ ಕೆಲಸಕ್ಕಾಗಿ ಆಯಾ ಕಂಪನಿಗಳ ಗುರುತಿನ ಚೀಟಿ ಮತ್ತು ಅನುಮತಿ ಪತ್ರ ಇದ್ದರೆ ಸಾಕು ಜಿಲ್ಲಾಡಳಿತದ ಪಾಸ್ ಇಲ್ಲದೆ ಎರಡು ಜಿಲ್ಲೆಗಳ ಮಧ್ಯೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಓಡಾಟ ಮಾಡಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ ಜಗದೀಶ್ ತಿಳಿಸಿದ್ದಾರೆ.

ಅನುಮತಿ ಪತ್ರ ಅಥವಾ ಇಟ್ಟುಕೊಂಡು ಯಾರು ಕೂಡ ಅನಾವಶ್ಯಕವಾಗಿ ಓಡಾಟ ಮಾಡಲು ಅವಕಾಶವಿಲ್ಲ. ಈ ಹಿಂದೆ ತುರ್ತು ಚಿಕಿತ್ಸೆ ಮತ್ತು ಸರಕು ಸಾಗಾಟಕ್ಕೆ ಮಾತ್ರ ಎರಡು ಜಿಲ್ಲೆಗಳ ಮಧ್ಯೆ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು ಇದು ಹೊರತುಪಡಿಸಿ ಉಳಿದ ಎಲ್ಲ ನಿರ್ಬಂಧಗಳು ಮುಂದುವರೆಯುತ್ತದೆ ಎಂದರು.

ಖಾಸಗಿ ಮತ್ತು ಸಂಸ್ಥೆಗಳಿಗೆ ಈ ಎರಡು ಜಿಲ್ಲೆಗಳ ಮಧ್ಯ ಓಡಾಡುವವರು ಅವರ ಸಂಸ್ಥೆಯ ಐಡಿ ಕಾರ್ಡ್ ಇಟ್ಟುಕೊಂಡರೆ ಸಾಕಾಗುತ್ತದೆ ಅದಕ್ಕಾಗಿ ಯಾರು ಕೂಡ ಜಿಲ್ಲಾಧಿಕಾರಿ ಕಚೇರಿಯಿಂದ ಪಡೆಯುವ ಅಗತ್ಯವಿಲ್ಲ ಉಳಿದವರು ಪಾಸ್‌ ಪಡೆದೇ ಅಂತರ್‌ ಜಿಲ್ಲೆಗಳ ಮಧ್ಯೆ ಓಡಾಟ ನಡೆಸಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

LEAVE A REPLY

Please enter your comment!
Please enter your name here