ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಓಡಾಡಲು ಪಾಸ್‌ ಬೇಕಿಲ್ಲ..! – ಸರ್ಕಾರದಿಂದ ಆದೇಶ

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ನಡುವೆ ಓಡಾಡಲು ಪಾಸ್‌ನ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಎರಡೂ ಜಿಲ್ಲೆಗಳನ್ನೂ ಒಂದೇ ಘಟಕಗಳಾಗಿ ಪರಿಗಣಿಸಿ ಈ ಆದೇಶ ಹೊರಡಿಸಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಾಕ್‌ಡೌನ್‌ ರಿಲೀಫ್‌ ಅಡಿಯಲ್ಲಿ ಅನುಮತಿ ನೀಡಲಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಎರಡೂ ಜಿಲ್ಲೆಗಳ ನಡುವೆ ಪಾಸ್‌ ಇಲ್ಲದೆಯೇ ಓಡಾಡಬಹುದು.

ಅನುಮತಿ ನೀಡಲಾದ ಆರ್ಥಿಕ ಚಟುವಟಿಕೆಗಳಿಗೆ ಓಡಾಡುವವರು ತಮ್ಮ ಕಂಪನಿ ಅಥವಾ ಸಂಸ್ಥೆ ನೀಡಿರುವ ಗುರುತಿನ ಚೀಟಿ, ಪತ್ರವನ್ನು ಹೊಂದಿದ್ದಾರೆ ಸಾಕು.

ಈಗಾಗಲೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಮತ್ತು ತುಮಕೂರು ಜಿಲ್ಲೆಗಳನ್ನು ಒಂದೇ ಘಟಕವನ್ನಾಗಿ ರಾಜ್ಯ ಸರ್ಕಾರ ಪರಿಗಣಿಸಿತ್ತು. ಈ ಜಿಲ್ಲೆಗಳ ನಡುವೆ ಓಡಾಡುವವರಿಗೆ ಪಾಸ್‌ನ ಅಗತ್ಯವಿಲ್ಲ. ಕೇವಲ ಸಂಬಂಧಪಟ್ಟ ಕಂಪನಿಯ ಐಡಿ ಕಾರ್ಡ್‌ ಸಾಕು ಎಂದು ಸರ್ಕಾರ ಸೂಚಿಸಿತ್ತು.

LEAVE A REPLY

Please enter your comment!
Please enter your name here