ಉಡುಪಿ ಜಿಲ್ಲೆಯ ವೀರಭದ್ರೇಶ್ವರ ದೇಗುಲದ ಆಡಳಿತಾಧಿಕಾರಿ ನೇಮಕಾತಿ ವಿವಾದ – ಯಥಾಸ್ಥಿತಿಗೆ ಸುಪ್ರೀಂಕೋರ್ಟ್‌ ಸೂಚನೆ

ಉಡುಪಿ ಜಿಲ್ಲೆಯ ಹಿರಿಯಡ್ಕದ ಶ್ರೀ ಮಹತೋಭಾರ ವೀರಭದ್ರೇಶ್ವರ ದೇಗುಲದ ಆಡಳಿತಾಧಿಕಾರಿ ನೇಮಕಾತಿ ಸಂಬಂಧ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸೂಚಿಸಿರುವ ಸುಪ್ರೀಂಕೋರ್ಟ್‌ ಸೂಚಿಸಿದೆ.

ಆಡಳಿತಾಧಿಕಾರಿ ನೇಮಕ ವಿವಾದ ಬಗೆಹರಿಸುವ ಸಂಬಂಧ ತೆಗೆದುಕೊಂಡ ಕ್ರಮಗಳು ಏನು ಎಂಬ ಬಗ್ಗೆ ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಮೂರ್ತಿಗಳಾದ ಎನ್‌ ವಿ ರಮಣ, ಆರ್‌ ಸುಭಾಷ್‌ರೆಡ್ಡಿ, ಸೂರ್ಯಕಾಂತ್‌ ಅವರಿದ್ದ ಪೀಠ ಸೂಚಿಸಿದೆ.

ವಿವಾದದ ಹಿನ್ನೆಲೆ ಏನು..?

ದೇಗುಲದ ಆಡಳಿತಾಧಿಕಾರಿ ವಿವಾದ ಬಗೆಹರಿಸುವ ಜವಾಬ್ದಾರಿಯನ್ನು ರಾಜ್ಯ ಧಾರ್ಮಿಕ ಪರಿಷತ್ತಿಗೆ ವಹಿಸಿ ಫೆಬ್ರವರಿ ೨, ೨೦೨೦ರಂದು ಕರ್ನಾಟಕ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಇದಕ್ಕೂ ಮೊದಲು ಸುನಿಲ್‌ ಹೆಗ್ಡೆ ಅವರನ್ನು ಆಡಳಿತಾಧಿಕಾರಿಯಾಗಿ ಪರಿಷತ್‌ ನೇಮಿಸಿತ್ತು.

ಆದರೆ ಸುನಿಲ್‌ ಹೆಗ್ಡೆ ನೇಮಕ ಪ್ರಶ್ನಿಸಿ ಆಳ್ವಾ ಹೆಗ್ಡೆ ಕುಟುಂಬ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಮೇಲ್ಮನವಿಯ ವಿಚಾರಣೆಯ ಬಳಿಕ ಸುನಿಲ್‌ ಹೆಗ್ಡೆ ನೇಮಕಾತಿಯನ್ನ ವಜಾಗೊಳಿಸಿದ್ದ ಹೈಕೋರ್ಟ್‌ ವಿವಾದ ಬಗೆಹರಿಸುವಂತೆ ಪರಿಷತ್‌ಗೆ ಸೂಚಿಸಿತ್ತು.

LEAVE A REPLY

Please enter your comment!
Please enter your name here