ಉಜಿರೆ: ಡಾ. ನವೀನ್ ಕುಮಾರ್ ಜೈನ್ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ

ಕಾರ್ಕಳ: ಜೆಸಿಐ ಇಂಡಿಯಾ ಕೊಡ ಮಾಡುವ ಉದ್ಯೋಗ ರತ್ನ ಪ್ರಶಸ್ತಿಗೆ ಉಜಿರೆ ಜೇಸಿ ಘಟಕ ಪೂರ್ವಧ್ಯಕ್ಷ ಡಾ. ನವೀನ್ ಕುಮಾರ್ ಭಾಜನರಾಗಿದ್ದಾರೆ.

ಅ.16ರಂದ ಬೆಳ್ಮಣ್ ಜೆಸಿಐ ಆಯೋಜಿಸಿದ್ದ ಜೇಸಿ ಬಿಜಿನೆಸ್ ಕಾನ್ಫರೆನ್ಸ್ ಸಮಾರಂಭದಲ್ಲಿ ಜೇಸಿ ವಲಯ ಅಧ್ಯಕ್ಷ್ಯ ಜೇಸಿ ರಾಯನ್ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರತಿಷ್ಠಿತ ವ್ಯಕ್ತಿತ್ವ ವಿಕಸನ ಸಂಸ್ಥೆಗಳಲ್ಲೊಂದಾದ ಜೂನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ವತಿಯಿಂದ ಉದ್ಯೋಗ ವಿಭಾಗದ ಉನ್ನತ ಸಾಧನೆಗಾಗಿ ಉದ್ಯೋಗ ರತ್ನ ಪ್ರಶಸ್ತಿ ನೀಡಲಾಗುತ್ತಿದ್ದು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಅಧ್ಯಯನ ಕೇಂದ್ರದ Assistant professor ಹಾಗೂ ಜೇಸಿಐ ನ ಪೂರ್ವಾಧ್ಯಕ್ಷ ಜೆಸಿ HGF ಡಾ. ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ. ಇವರು ಉಜಿರೆ ಜೆಸಿಐನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಪ್ರಸ್ತುತ ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.