ಉಕ್ರೇನ್ ದೇಶದ ಡಾನ್ ಬಾಸ್ ಪ್ರಾತ್ಯದಲ್ಲಿ ಸೈನಿಕ ಕಾರ್ಯಾಚರಣೆ ನಡೆಸುತ್ತಿರುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಪ್ರಕಟಿಸಿದ್ದಾರೆ.
ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ರಷ್ಯಾವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮನವಿ ಮಾಡುತ್ತಿದ್ದ ಸಂದರ್ಭದಲ್ಲೇ ಪುಟಿನ್ ಟಿವಿ ಮೂಲಕ ಯುದ್ಧ ಘೋಷಣೆ ಮಾಡಿದ್ದಾರೆ.
ಉಕ್ರೇನ್ ದೇಶವನ್ನು ಅಕ್ರಮಿಸುವ ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಸ್ಪಷ್ಟಪಡಿಸಿದ್ದಾರೆ.
ಪೂರ್ವ ಉಕ್ರೇನ್ ನಲ್ಲಿರುವ ಉಕ್ರೇನ್ ಪಡೆಗಳು ತಮ್ಮ ಆಯುಧಗಳನ್ನು ಬಿಟ್ಟು ತೆರಳುವಂತೆ ಪುಟಿನ್ ಕೋರಿದ್ದಾರೆ.
ರಷ್ಯಾದ ದುರಾಕ್ರಮಣ ಯುರೋಪ್ ಖಂಡದಲ್ಲಿ ಭಾರಿ ಯುದ್ಧಕ್ಕೆ ನಾಂದಿ ಹಾಡಲಿದೆ ಎಂಬ ಆತಂಕವನ್ನು ಉಕ್ರೇನ್ ಅಧ್ಯಕ್ಷರು ಹೊರಹಾಕಿದ್ದಾರೆ.
ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ನಲ್ಲಿ ಭಾರಿ ಸ್ಫೋಟ ಕೇಳಿ ಬರುತ್ತಿವೆ