ಈ ಪೊಲೀಸ್ ನಿಜಕ್ಕೂ ಗ್ರೇಟ್..

ಕೊರೋನಾದಿಂದ ಇಡಿ ದೇಶ ಲಾಕ್‍ಡೌನ್ ಆಗಿದೆ. ಹೊರಗೆ ಜನ ಸಂಚಾರ ಇಲ್ಲ. ಹೀಗಾಗಿ ಜನ ಸಂಚಾರ ಪ್ರದೇಶಗಳಲ್ಲಿ ಮೂಕ ಜೀವಿಗಳು ಆಹಾರ ಇಲ್ಲದೇ ಪರದಾಡುತ್ತಿವೆ. ಹಸಿವಿನಿಮದ ಒದ್ದಾಡುತ್ತಿರುವ ಪ್ರಾಣಿಗಳಿಗೆ, ಪ್ರಾಣಿಪ್ರಿಯರು ಆಹಾರ ಒದಗಿಸುತ್ತಾ ಬರುತ್ತಿದ್ದಾರೆ. ಪೊಲೀಸ್ ಠಾಣೆಗೆ ಬಂದ ಮಂಗಣ್ಣನಿಗೆ ಪೊಲೀಸ್ ಅಧಿಕಾರಿಯೊಬ್ಬರು, ಬಾಳೆ ಹಣ್ಣನ್ನು ತಿನ್ನಿಸಿ ಮಾನವೀಯತೆ ಮೆರೆದಿದ್ದಾರೆ. ಬಾಳೆಹಣ್ಣನ್ನು ಸುಲಿದು ಕೋತಿಯನ್ನು ಪಕ್ಕದಲ್ಲಿ ಕೂರಿಸಿಕೊಂಡು ತಿನ್ನಿಸಿದ್ದಾರೆ.

ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋ ನೋಡಿದವರೆಲ್ಲಾ ಪೊಲೀಸಪ್ಪನನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ನೀವು ಕೂಡ ಮೆಚ್ಚಿಕೊಳ್ಳದೇ ಇರಲ್ಲ ಅಲ್ವಾ..?

LEAVE A REPLY

Please enter your comment!
Please enter your name here