ಇ-ಸಿಗರೇಟ್ ನಿಷೇಧ ಮಾಡುವಂತೆ ಯುಜಿಸಿ ಸುತ್ತೋಲೆ.

ಯುವಪೀಳಿಗೆ ಸಿಗರೇಟ್, ಮದ್ಯಪಾನ, ಡ್ರಗ್ಸ್ ಕಡೆಗೆ ಆಕರ್ಷಿತರಾಗಿ ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇವುಗಳ ಸಾಲಿಗೆ ಎಲೆಕ್ಟ್ರಾನಿಕ್ ಸಿಗರೇಟ್ ಕೂಡ ಸೇರ್ಪಡೆಯಾಗಿತ್ತು.

ಇದೀಗ ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧಿಸುವಂತೆ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದ ಯುಜಿಸಿ.

ಇ-ಸಿಗರೇಟ್ ಸೇವನೆಯಿಂದ ಗರ್ಭಿಣಿಯರು, ಅಪ್ರಾಪ್ತರು, ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.

ಅತಿಯಾದ ಹೊಗೆ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತಿದೆ ಎಂಬ ದೃಷ್ಟಿಯಿಂದ ಮಾರುಕಟ್ಟೆಗೆ ಇ- ಸಿಗರೇಟ್ ಬಂದಿದೆ.        ಆದರೆ ಇ-ಸಿಗರೇಟ್ ಉಪಕಾರದ ಬದಲು ಅಪಕಾರವೇ ಹೆಚ್ಚು. ಧೂಮಪಾನದ ಚಟದಿಂದ ಪಾರಾಗಲು ಇ- ಸಿಗರೇಟ್ ಸೇದಲು ಆರಂಭಿಸಿದ್ದ ಎಷ್ಟೋ ಜನರು ಈಗ ಅದಕ್ಕೆ ದಾಸರಾಗಿಬಿಟ್ಟಿದ್ದಾರೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಭಾರತದಲ್ಲಿ ವಿಶ್ವವಿದ್ಯಾಲಯಗಳ ಸಮನ್ವಯತೆ ಮತ್ತು ಶಿಕ್ಷಣದ ಗುಣಮಟ್ಟ ನಿರ್ವಹಣೆಗಾಗಿ 1956ರಲ್ಲಿ ಕೇಂದ್ರ ಸರಕಾರದಿಂದ ಸ್ಥಾಪಿಸಲ್ಪಟ್ಟ ಒಂದು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಶ್ವವಿದ್ಯಾಲಯಗಳಿಗೆ ಮಾನ್ಯತೆ ನೀಡುತ್ತದೆ ಮತ್ತು ಅಂತಹ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವಿಕಾಸಕ್ಕಾಗಿ ಧನ ಸಹಾಯ ಮಾಡುತ್ತದೆ

ಇ-ಸಿಗರೇಟ್ ನಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೃದಯ ಹಾಗೂ ಶ್ವಾಸಕೋಶ ಮೆದುಳಿನ ಮೇಲೆ ಪರಿಣಾಮ ಬೀರುತ್ತೆ. ಹೀಗಾಗಿ ಇ-ಸಿಗರೇಟ್ ನಿಷೇಧ ಮಾಡಿದ ಯುಜಿಸಿ.

ಅಲ್ಲದೆ ಎಲ್ಲಾ ವಿವಿ ಗಳು, ಶೈಕ್ಷಣಿಕ ಸಂಸ್ಥೆಗಳು ಇ-ಸಿಗರೇಟ್ ಬಗ್ಗೆ ಜಾಗೃತಿ ಮೂಡಿಸಬೇಕು ಅಂತ ಸೂಚನೆ‌ಯನ್ನು ಸಹ ನೀಡಿದೆ. ಈ‌ ಹಿಂದೆ ಕೇಂದ್ರ ಸರ್ಕಾರ ಕೂಡಾ ಇ-ಸಿಗರೇಟ್ ನಿಷೇಧ ಮಾಡಿತ್ತು.

ಈಗ ಕೇಂದ್ರ ಸರ್ಕಾರದ ನಿರ್ಧಾರದ ಬಳಿಕ ಯುಜಿಸಿಯಿಂದಲೂ ಇ-ಸಿಗರೇಟ್ ಗೆ ನಿಷೇಧ.

LEAVE A REPLY

Please enter your comment!
Please enter your name here