ಇವತ್ತು ಯಡಿಯೂರಪ್ಪ ನೋಡುವ ಸಿನಿಮಾ ಇದು – ನಾವು ನೀವು ನೋಡಲೇಬೇಕಾದ ಆ ಮೂವಿ ಯಾವುದು ಗೊತ್ತಾ..? ಶೇರ್‌ ಮಾಡಿ ತಲುಪಿಸಿ

ಸಂಪುಟ ವಿಸ್ತರಣೆ ತಲೆನೋವಿನ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಇವತ್ತು ಅಪರೂಪದಲ್ಲಿ ಅಪರೂಪವಾಗಿರುವ ಸಿನಿಮಾ ವೀಕ್ಷಿಸಲಿದ್ದಾರೆ. ಸಂಜೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಓರಾಯನ್‌ಮಾಲ್‌ನಲ್ಲಿ ಮೂವಿ ನೋಡಲಿದ್ದಾರೆ. ಅಂದಹಾಗೆ ಆ ಸಿನಿಮಾದ ಹೆಸರು ವೈಲ್ಡ್‌ ಕರ್ನಾಟಕ. ಸಂಜೆ ೫.೩೦ಕ್ಕೆ ನಡೆಯುವ ಚಿತ್ರ ವೀಕ್ಷಣೆ ವೇಳೆ ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ ಕೂಡಾ ಸಾಥ್‌ ನೀಡಲಿದ್ದಾರೆ.

ವೈಲ್ಡ್‌ ಕರ್ನಾಕಟ. ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಕರ್ನಾಟಕ ವನ್ಯ ಸಂಪತ್ತಿನ ಬಗ್ಗೆ ತೆಗೆಯಲಾಗಿರುವ ಅಲ್ಟ್ರಾ ಹೆಚ್‌ಡಿ ಸಿನಿಮಾ. ವಿಶಾಲ ಕರ್ನಾಟಕದಲ್ಲಿ ಹರಡಿಕೊಂಡಿರುವ ದಟ್ಟಾರಣ್ಯಗಳಲ್ಲಿ ಅಗಾಧವಾಗಿರುವ ವನ್ಯಜೀವಿ ಸಂಪತ್ತನ್ನು ಅದ್ಭುತವಾಗಿ ತೆರೆಯ ಮೇಲೆ ತರಲಾದೆ.

ಈ ಸಿನಿಮಾದ ಅವಧಿ ೫೨ ನಿಮಿಷ. ಆದರೆ ಈ ಸಿನಿಮಾದ ಶೂಟಿಂಗ್‌ಗೆ ಐದು ವರ್ಷದ ಸಮಯ ತೆಗೆದುಕೊಳ್ಳಲಾಗಿದೆ. ೧೫ ಸಾವಿರ ಗಂಟೆಗಳಷ್ಟು ಹೊತ್ತು ಸಿನಿಮಾ ನಿರ್ಮಾಣ ಮಾಡಲಾಗಿದೆ.

ವೈಲ್ಡ್‌ ಕರ್ನಾಟಕ ಸಿನಿಮಾದ ಸಂಭಾಷಣೆ ಮಾಡಿರುವುದು ಪ್ರಸಿದ್ಧ ನಿರೂಪಣೆಕಾರ ಮತ್ತು ವನ್ಯಜೀವಿ ತಜ್ಞ ಸರ್‌ ಡೇವಿಡ್‌ಅಟನ್‌ಬರ್ಗ್‌. ಸಿನಿಮಾಕ್ಕೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತಕಾರ ರಿಕಿ ಕೇಜ್‌ ಸಂಗೀತವಾಗಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಅಮೋಘವರ್ಷ ಜೆ ಎಸ್‌, ಕಲ್ಯಾಣ್‌ ವರ್ಮಾ, ಸರತ್‌ ಚಂಪತಿ, ಐಎಫ್‌ ಎಸ್‌ ಅಧಿಕಾರಿ ವಿಜಯ್‌ ಮೋಹನ್‌ ರಾಯ್‌ ಸಿನಿಮಾವನ್ನು ನಿರ್ಮಿಸಿದ್ದಾರೆ.

LEAVE A REPLY

Please enter your comment!
Please enter your name here