ಇವತ್ತಿನಿಂದ ನೈಟ್‌ ಕರ್ಫ್ಯೂನಲ್ಲೂ ಬಸ್‌, ಅಟೋ, ಕ್ಯಾಬ್‌ ಓಡಾಟ ಶುರು..!

ಇವತ್ತಿನಿಂದ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಸಾರ್ವಜನಿಕ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟು ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ರಾತ್ರಿ ಕರ್ಫ್ಯೂ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೆ ಅಗತ್ಯ ಸೇವೆ ಬಿಟ್ಟು ಉಳಿದ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿತ್ತು.

ಆದರೆ ನಿನ್ನೆ ಹೊರಡಿಸಿದ ಹೊಸ ಆದೇಶದಲ್ಲಿ ರಾಜ್ಯ ಸರ್ಕಾರ ಬಸ್‌ಗಳು, ಆಟೋ, ಕ್ಯಾಬ್‌, ಟ್ಯಾಕ್ಸಿಗಳನ್ನು ನೈಟ್‌ ಕರ್ಫ್ಯೂ ಹೊತ್ತಲ್ಲೂ ಓಡಿಸಬಹುದು ಎಂದು ಅನುಮತಿಸಿದೆ.

ರಾತ್ರಿ 9ಗಂಟೆಯ ಬಳಿಕವೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳು ಓಡಾಡಲಿವೆ. ರಾತ್ರಿ 9 ಗಂಟೆಯ ಬಳಿಕವೂ ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ ಸಂಚರಿಸಲಿದೆ.

ಇವತ್ತು ರಾತ್ರಿ 9ಗಂಟೆಯ ಬಳಿಕವೂ ರಾಜ್ಯದ ಊರು ಊರುಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡಲಿವೆ. ಪ್ರಯಾಣಿಕರ ಲಭ್ಯತೆಯ ಆಧಾರದಲ್ಲಿ ಬಸ್‌ಗಳನ್ನು ಓಡಿಸುವುದಕ್ಕೆ ಸರ್ಕಾರ ನಿರ್ಧರಿಸಿದೆ. ಮುಂಗಡ ಟಿಕೆಟ್‌ ಬುಕ್ಕಿಂಗ್‌ಗೂ ಎಂದಿನಂತೆ ಅವಕಾಶವಿದೆ.

ಆಟೋ, ಕ್ಯಾಬ್‌, ಟ್ಯಾಕ್ಸಿಗಳು ಕೂಡಾ ರಾತ್ರಿ 9ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೂ ಓಡಾಡಬಹುದು.

ಈ ಮೂಲಕ ರಾಜ್ಯದಲ್ಲಿ ಸಾರ್ವಜನಿಕ ಸಾರಿಗೆ ಮತ್ತೆ ಎಂದಿನಂತೆ 24 ಗಂಟೆಯೂ ಸಹಜ ಸ್ಥಿತಿಗೆ ಮರಳುತ್ತಿದೆ.

LEAVE A REPLY

Please enter your comment!
Please enter your name here