ಇವತ್ತಿನಿಂದ ಈ ಜಿಲ್ಲೆಗಳಲ್ಲಿ ಈ ಅಂಗಡಿಗಳನ್ನು ತೆರೆಯಬಹುದು..! – ಇದು ಲಾಕ್‌ಡೌನ್‌ ರಿಲೀಫ್‌

ದೇಶದಲ್ಲಿ ಲಾಕ್‌ಡೌನ್‌ನಿಂದ ಇನ್ನಷ್ಟು ವಿನಾಯಿಗಳನ್ನು ಘೋಷಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದ್ದು, ಇವತ್ತಿನಿಂದ ಎಲ್ಲ ರೀತಿಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ.

ಲಾಕ್‌ಡೌನ್‌ ಘೋಷಣೆ ಆದ ಬಳಿಕ ಕೇವಲ ಅಗತ್ಯವಸ್ತುಗಳನ್ನು ಮಾರುವ ಅಂಗಡಿಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು.

ಆದರೆ ಗೃಹ ಸಚಿವಾಲಯದ ಹೊಸ ಆದೇಶದಲ್ಲಿ ಅಗತ್ಯ ವಸ್ತುವಲ್ಲದ ಅಂಗಡಿಗಳನ್ನೂ ಅಂದರೆ ಎಲ್ಲ ಬಗೆಯ ಅಂಗಡಿಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.

ಮಧ್ಯರಾತ್ರಿ ಗೃಹ ಸಚಿವಾಲಯ ತನ್ನ ಲಾಕ್‌ಡೌನ್‌ ಮಾರ್ಗಸೂಚಿಯಲ್ಲಿ ಮಾರ್ಪಡು ಮಾಡಿ ಸುತ್ತೋಲೆ ಹೊರಡಿಸಿದೆ. ರಾಜ್ಯಗಳ ಕಾನೂನಿನ ಪ್ರಕಾರ ಅಂದರೆ (ಕರ್ನಾಟಕದಲ್ಲಿ – ಕರ್ನಾಟಕ ಅಂಗಡಿ ಮತ್ತು ಮಳಿಗೆಗಳ ಕಾಯ್ದೆ) ನೋಂದಣಿ ಆಗಿರುವ ಅಂಗಡಿಗಳನ್ನು ತೆರೆಯಲು ಅನುಮತಿ ಸಿಕ್ಕಿದೆ.

1) ನಗರಸಭೆ ಮತ್ತು ಕಾಪೋರೇಷನ್‌ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಗಳಲ್ಲಿ ವಸತಿ ಸಂಕೀರ್ಣ ಮತ್ತು ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.

2) ನಗರಸಭೆ ಮತ್ತು ಕಾರ್ಪೋರೇಷನ್‌ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಕೇವಲ ವಸತಿ ಸಂಕೀರ್ಣದಲ್ಲಿ ಬರುವ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಅಲ್ಲದೇ ಒಂಟಿ ಅಂಗಡಿಗಳು ಮತ್ತು ಅಕ್ಕಪಕ್ಕದ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

3) ಆದರೆ ಮಾಲ್‌ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಒಂದೇ ಬ್ರ್ಯಾಂಡ್‌ ಮತ್ತು ಬಹು ಬ್ರ್ಯಾಂಡ್‌ನ ಮಾಲ್‌ಗಳು ಬಂದ್‌ ಆಗಿರಲಿವೆ. ಅವುಗಳಿಗೆ ವಿನಾಯ್ತಿ ನೀಡಿಲ್ಲ.

4) ಶೇಕಡಾ 50 ರಷ್ಟು ನೌಕರರಷ್ಟೇ ಕೆಲಸ ಮಾಡಬೇಕು

5) ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ

ಆದರೆ ಬಿಬಿಎಂಪಿ ಮತ್ತು ಜಿಲ್ಲಾಡಳಿತ ಗುರುತಿಸಿರುವ ಕಂಟೈನ್‌ಮೆಂಟ್‌ ಝೋನ್‌ಗಳಲ್ಲಿ ಈ ವಿನಾಯ್ತಿ ಅನ್ವಯಿಸಲ್ಲ.

ಈಗಾಗಲೇ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೇಂದ್ರ ಸರ್ಕಾರದ ಈ ಹಿಂದಿನ ಆದೇಶದಂತೆ ಹಲವು ಬಗೆಯ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಿತ್ತು.

1) ಸಿಮೆಂಟ್‌, ಕಬ್ಬಿಣ, ಹಾರ್ಡ್‌ವೇರ್‌ ಶಾಪ್‌

2) ಮೊಬೈಲ್‌ ರೀಚಾರ್ಜ್‌, ಫ್ಯಾನ್ಸ್‌ ಮಾರುವ ಅಂಗಡಿ, ಸ್ಟೇಷನರಿ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಮಾರುವ ಅಂಗಡಿ

3) ಐಸ್‌ಕ್ರೀಮ್‌ ಪಾರ್ಲರ್‌, ರಿಯಲ್‌ ಎಸ್ಟೇಟ್‌ ಕಂಪನಿಗಳನ್ನು ತೆರೆಯಲು ಅನುಮತಿ ನೀಡಿತ್ತು.

LEAVE A REPLY

Please enter your comment!
Please enter your name here