ಇರಾನ್ ಅಣು ಸ್ಥಾವರದ ಬಳಿ ಭೂಕಂಪ..

ಇದು ಕಾಕತಾಳಿಯವೋ..? ಅಥವಾ ಬೇರೇನೋ ಗೊತ್ತಿಲ್ಲ. ಅಮೆರಿಕ ಸೈನಿಕ ಸ್ಥಾವಗಳ ಮೇಲೆ ಇರಾನ್ ದಾಳಿ ನಡೆಸಿದ ಸ್ವಲ್ಪ ಹೊತ್ತಿಗೆ ಇರಾನ್‍ನಲ್ಲಿ ಉಕ್ರೇನ್‍ನ ವಿಮಾನ ಪತನ ಆಯಿತು. ಇದಾದ ಕೆಲ ಗಂಟೆಗಳಲ್ಲಿ ಇರಾನ್ ಅಣು ಸ್ಥಾವರದ ಬಳಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 4.9ರಷ್ಟು ದಾಖಲಾಗಿದೆ. ಈಗಾಗಲೇ ಯುದ್ಧ ಭೀತಿಯಲ್ಲಿರುವ ಇರಾನ್ ಜನತೆ ಭೂಕಂಪನಕ್ಕೆ ಬೆಚ್ಚಿ ಬಿದ್ದಿದ್ದಾರೆ. ಇರಾನ್‍ನ ಬುಷ್‍ಹರ್ ನ್ಯೂಕ್ಲಿಯರ್ ಪವರ್ ಪ್ಲಾಂಟ್ ಸಮೀಪವೇ ಭೂಮಿ ಕಂಪಿಸಿದೆ.

ಇದು ಪ್ರಕೃತಿ ಸಹಜ ಭೂಕಂಪನ ಎಂದು ಅಮೆರಿಕ ಭೂವಿಜ್ಞಾನ ಸಂಸ್ಥೆ ಹೇಳಿಕೊಂಡಿದೆ. ಆದರೂ, ಇದು ಅಮೆರಿಕಾ ಕೆಲಸನಾ ಎಂದು ಇರಾನ್ ಜನತೆ ಅನುಮಾನ ಪಡುತ್ತಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿಯೂ ಭೂಕಂಪ
ಡಿಸೆಂಬರ್ 27ರಂದು ಸಹ ಬುಷ್‍ಹರ್ ನ್ಯೂಕ್ಲೀಯರ್ ಪವರ್ ಪ್ಲಾಮಟ್ ಬಳಿಯೇ ಭೂಮಿ ಕಂಪಿಸಿತ್ತು. ಇರಾನ್ ಸಮುದ್ರ ತೀರದಲ್ಲಿ 2010ರ ಆಗಸ್ಟ್‍ನಲ್ಲಿ ಬುಷ್‍ಹರ್ ಅಣು ಸ್ಥಾವರ ನಿರ್ಮಿಸಲಾಗಿತ್ತು. ಪಶ್ಚಿಮ ಏಷ್ಯಾದ ಮೊದಲ ಅಣುಸ್ಥಾವರ ಎಂಬ ಗರಿಮೆಗೆ ಪಾತ್ರವಾಗಿತ್ತು.

LEAVE A REPLY

Please enter your comment!
Please enter your name here