ಇಪಿಎಫ್ ಕೈಗೆ ಬರೋದೆಷ್ಟು..? ಟ್ಯಾಕ್ಸ್ ಹೋಗೋದೆಷ್ಟು..? ಕೇಂದ್ರದಿಂದ ಲಾಭವೋ..? ನಷ್ಟವೋ..?

ಎಡಗೈಯಲ್ಲಿ ಕೊಟ್ಟು ಬಲಗೈಯಲ್ಲಿ ಕಿತ್ತುಕೊಂಡಂತೆ ಆಗಿದೆ ಕೇಂದ್ರ ಸರ್ಕಾರ ಆತ್ಮ ನಿರ್ಭರ ಭಾರತ ಆರ್ಥಿಕ ಪ್ಯಾಕೇಜ್‍ನಡಿ ಉದ್ಯೋಗಿಗಳಿಗೆ ನೀಡಿದ ವರಗಳು.

15 ಸಾವಿರದೊಳಗಿನ ವೇತನದಾರರಿಗೆ ಶೇಕಡಾ 12ರಷ್ಟು ಇಪಿಎಫ್ ಹಣವನ್ನು ಕಂಪನಿ ಮತ್ತು ಉದ್ಯೋಗಿಗಳ ಪರವಾಗಿ ಸರ್ಕಾರ ಮೂರು ತಿಂಗಳ ಕಾಲ ಪಾವತಿ ಮಾಡಲಿದೆ. ಇದರ ಜೊತೆಗೆ ಕಷ್ಟ ಕಾಲದಲ್ಲಿ ಉದ್ಯೋಗಿಗಳು ಮತ್ತು ಕಂಪನಿ ಮಾಲೀಕರ ಕೈಗಳಲ್ಲಿ ಮತ್ತಷ್ಟು ಹಣ ಇರುವಂತೆ ಮಾಡಲು ಇಪಿಎಫ್ ಪಾಲನ್ನು ಮೂರು ತಿಂಗಳ ಮಟ್ಟಿಗೆ ಶೇಕಡಾ 2ರಷ್ಟು ಕಡಿಮೆ ಮಾಡಿದೆ. ನೆನಪಿಡಿ, ಈ ಕ್ಷಣದವರೆಗೂ ಇಪಿಎಫ್ ಪಾಲು ಶೇಕಡಾ 12ರಷ್ಟಿತ್ತು. ಈಗ ಶೇಕಡಾ 10ಕ್ಕೆ ಕಡಿಮೆ ಮಾಡಿದೆ. ಇದರಿಂದ ಖಾಸಗಿ ಕಂಪನಿಯ ಮಾಲೀಕನಿಗೆ ಶೇಕಡಾ 2ರಷ್ಟು ಉಳಿತಾಯ ಆಗಲಿದೆ. ಉದ್ಯೋಗಿ ಮನೆಗೆ ತೆಗೆದುಕೊಂಡು ಹೋಗುವ ವೇತನದಲ್ಲಿ ಶೇಕಡಾ 2ರಷ್ಟು ಹೆಚ್ಚಳ ಕಂಡು ಬರಲಿದೆ.

ಸದ್ಯ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಈ ನಿರ್ಧಾರದಿಂದ ಆರ್ಥಿಕ ವರ್ಷದ ಕೊನೆಯಲ್ಲಿ ಆದಾಯ ತೆರಿಗೆ ಮೇಲೆ ಪರಿಣಾಮ ಬೀರಲಿದೆ ಎಂದು ಆರ್ಥಿಕ ತಜ್ಞರು ಹೇಳುತ್ತಿದ್ದಾರೆ. ಇಪಿಎಫ್‍ನಲ್ಲಿ ಜಮೆ ಆಗುವ ಹಣದ ಮೇಲೆ ಸೆಕ್ಷನ್ 80ರ ಅಡಿ ರಿಯಾಯ್ತಿ ಸಿಗುತ್ತಿದೆ. ಆದರೆ, ಮೂರು ತಿಂಗಳ ಕಾಲ ಇಪಿಎಫ್‍ಗೆ ಹೋಗಬೇಕಾದ ಶೇಕಡಾ 2ರಷ್ಟು ಹಣ (ಒಟ್ಟು ಶೇಕಡಾ 6ರಷ್ಟು ಹಣ) ಟೇಕ್ ಹೋಂಗೆ ಬಂದು ಸೇರುವುದರಿಂದ ಅದನ್ನು ಉದ್ಯೋಗಿಯ ಆದಾಯ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ಮೊತ್ತಕ್ಕೆ ಕೂಡ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಇದಕ್ಕೆ ಯಾವುದೇ ರಿಯಾಯ್ತಿ ಇರುವುದಿಲ್ಲ.

ಉದಾಹರಣೆಗೆ ನಿಮ್ಮ ಆದಾಯ ತಿಂಗಳಿಗೆ ಸಾವಿರ ರೂ. ಹೆಚ್ಚಾಯ್ತು ಎಂದಿಟ್ಟುಕೊಳ್ಳಿ. ನೀವು ಅತ್ಯಧಿಕ ತೆರಿಗೆ ಸ್ಲಾಬ್ ಪರಿಧಿಯಲ್ಲಿ ಇದ್ದರೆ, ನೀವು ಹೊಂದಿದ ಹೆಚ್ಚುವರಿ ಆದಾಯಕ್ಕೆ ತೆರಿಗೆ ಹೋಗಿ ನಿಮ್ಮ ಕೈಗೆ ಸಿಗುವುದು 700 ರೂ. ಅಷ್ಟೇ ಮಿಕ್ಕ 300 ರೂ. ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸಲೇಬೇಕಾಗುತ್ತದೆ.

ಅದೇ ವಿಧದಲ್ಲಿ ನೀವು ಮೂರು ತಿಂಗಳಿಗೆ 18000 ಹಣವನ್ನು ಇಪಿಎಫ್‍ಗೆ ಜಮೆ ಮಾಡುತ್ತೀರಾ ಎಂದುಕೊಳ್ಳೋಣ. ನೀವು ಅತ್ಯಧಿಕ ತೆರಿಗೆ ಸ್ಲಾಬ್(ಶೇ.30)ನಲ್ಲಿ ಇದ್ದರೆ ನೀವು ಈ ಮೊತ್ತಕ್ಕೆ 5,400 ತೆರಿಗೆ ವಿನಾಯ್ತಿ ಹೊಂದಬಹುದು. ಈಗ ಇಪಿಎಫ್‍ಗೆ ಜಮೆ ಆಗುವ ಹಣ 15ಕ್ಕೆ ಇಳಿಯುವುದರಿಂದ ನಿಮಗೆ ಸಿಗುವ ತೆರಿಗೆ ವಿನಾಯ್ತಿ 4500 ರೂ.ಗೆ ಇಳಿಯಲಿದೆ. ನಿಮಗೆ 5400 ರೂ ತೆರಿಗೆ ವಿನಾಯ್ತಿ ಬೇಕು ಎಂದಾದಲ್ಲಿ ಸೆಕ್ಷನ್ 80ಸಿ ಅಡಿ ಮೂರು ಸಾವಿರ ರೂಪಾಯಿಗಳನ್ನು ಉಳಿತಾಯ ಮಾಡಬೇಕಾಗುತ್ತದೆ.

ರಿಟೈರ್‍ಮೆಂಟ್ ಮೇಲೆಯೂ ಪ್ರಭಾವ
ನೀವು ಪ್ರತಿ ತಿಂಗಳು 12,000 ರೂ ಹಣವನ್ನು ಇಪಿಎಫ್‍ನಲ್ಲಿ ಜಮೆ ಮಾಡುತ್ತಿದ್ದೀರಾ ಎಂದುಕೊಳ್ಳೋಣ. ಸದ್ಯ ಮೂರು ತಿಂಗಳ ಅವಧಿಯಲ್ಲಿ ತಿಂಗಳಿಗೆ 2 ಸಾವಿರ ರೂ. ಕಡಿಮೆ ಆಗುತ್ತದೆ. 25 ವರ್ಷಗಳ ಬಳಿಕ ನೀವು ನಿವೃತ್ತಿ ಆದ ಮೇಲೆ ಸಿಗುವ ಮೊತ್ತ ಕೂಡ ಕಡಿಮೆ ಆಗಲಿದೆ. ಅಂದರೆ, ಆರು ಸಾವಿರ ಹಣಕ್ಕೆ ಶೇ.8.55 ಬಡ್ಡಿ ಬಣ ಲೆಕ್ಕ ಹಾಕಿದರೆ 46 ಸಾವಿರ ರೂ.ಗಳನ್ನು ನೀವು ಕಳೆದುಕೊಳ್ಳಲಿದ್ದೀರಿ.

LEAVE A REPLY

Please enter your comment!
Please enter your name here