ಇನ್ಮುಂದೆ ಈ ವಿಶ್ವವಿದ್ಯಾನಿಲಯದಲ್ಲಷ್ಟೇ ದೂರ ಶಿಕ್ಷಣ..!

ಕರ್ನಾಟಕದ ವಿಶ್ವವಿದ್ಯಾನಿಲಯಗಳಲ್ಲಿ ದೂರ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಓದಲೇಬೇಕಾದ ಸುದ್ದಿ ಇದು. ಇನ್ಮುಂದೆ ನಮ್ಮ ರಾಜ್ಯದಲ್ಲಿ ಕೇವಲ ಒಂದೇ ಒಂದು ವಿವಿಯಲ್ಲಷ್ಟೇ ದೂರ ಶಿಕ್ಷಣ ಪಡೆಯಬೇಕಾಗುತ್ತದೆ. ಹೌದು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ (ಕೆಎಸ್‌ಒಯು)ದಲ್ಲಷ್ಟೇ ದೂರ ಶಿಕ್ಷಣ ಪಡೆಯಬಹುದಾಗಿದೆ. ಈ ಸಂಬಂಧ ನಿಯಮ ಬದಲಾವಣೆಗೆ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸದ್ಯ ಕೆಎಸ್‌ಒಯು ಮಾತ್ರವಲ್ಲದೇ ಮೈಸೂರು, ಬೆಂಗಳೂರು, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯ, ಮಂಗಳೂರು ವಿವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯ ಮುಕ್ತ ಶಿಕ್ಷಣವನ್ನು ನೀಡುತ್ತಿದೆ.

ಸರ್ಕಾರದ ಆಧೀನದಲ್ಲಿ ಬರುವ ಬೇರೆ ವಿವಿಗಳಲ್ಲಿ ಮುಕ್ತ ಶಿಕ್ಷಣ ನೀಡುವುದರಿಂದ ತನ್ನ ಆದಾಯ ಖೋತಾ ಆಗುತ್ತಿದೆ ಎನ್ನುವುದು ಕೆಎಸ್‌ಒಯು ವಾದ.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಮಿತಿ ಸಭೆಯಲ್ಲಿ ಕೇವಲ ಕೆಎಸ್‌ಒಯು ಮೂಲಕವಷ್ಟೇ ದೂರ ಶಿಕ್ಷಣ ಪಡೆಯಬಹುದು ಎಂಬ ತೀರ್ಮಾನ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here