ಇನ್ನೂ ಮೂರು ತಿಂಗಳು ಶಾಲೆ ತೆರೆಯುವುದು ಬೇಡ – ಈಗಲೇ ತೆರೆದರೆ ಅಪಾಯ – ಸಿದ್ದರಾಮಯ್ಯ ಎಚ್ಚರಿಕೆ

ಕೊರೋನಾ ಹಿನ್ನೆಲೆಯಲ್ಲಿ ಇನ್ನೂ ಮೂರು ತಿಂಗಳು ಶಾಲೆಗಳನ್ನು ತೆರೆಯಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಈಗಲೇ ಶಾಲೆಗಳನ್ನು ತೆರೆದರೆ ಅಪಾಯ ಹೆಚ್ಚು ಸರ್ಕಾರವನ್ನು ಎಚ್ಚರಿಸಿದ್ದಾರೆ.

ಮೈಸೂರಲ್ಲಿ ಮಾತಾಡಿದ ಅವರು, ಸಾಧ್ಯವಾದರೆ ಎರಡು ಪಾಳಿಗಳಲ್ಲಿ ಶಾಲೆಗಳನ್ನು ನಡೆಸುವಂತೆ ಸಲಹೆ ನೀಡಿದರು.

ಮಕ್ಕಳಿಗೆ ಕೊರೋನಾ ತಗುಲಿದರೆ ಆಗ ಇಡೀ ಕುಟುಂಬಕ್ಕೆ ಹಬ್ಬುತ್ತದೆ. ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಂಡು ಶಾಲೆಗಳನ್ನು ತೆರೆಯಬೇಕೆಂದು. ಈ ಪೂರ್ವ ಸಿದ್ಧತೆ ಎಲ್ಲ ಶಾಲೆಗಳಿಗೂ ಅನ್ವಯ ಆಗಬೇಕು. ಈ ಬಗ್ಗೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ ಸಲಹೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೊರೋನಾಗೆ ಇನ್ನೂ ಮದ್ದು ಸಿಕ್ಕಿಲ್ಲ. ಮಾಸ್ಕ್‌ ಮತ್ತು ಸ್ಯಾನಿಟೈಸ್‌ ಮಾಡಿಕೊಳ್ಳುವುದೇ ಮದ್ದು. ಫ್ರಾನ್ಸ್‌ನಲ್ಲಿ ಶಾಲೆ ತೆರೆದ ಬಳಿಕ ಮಕ್ಕಳಿಗೆ ಕೊರೋನಾ ಬಂದಿದೆ. ಹಾಗಾಗಿ ಸರ್ಕಾರ ಶಾಲೆಗಳನ್ನು ತೆರೆಯಲು ಪೂರ್ವ ಸಿದ್ಧತೆ ಮಾಡಿಕೊಳ್ಳಲೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

LEAVE A REPLY

Please enter your comment!
Please enter your name here