ಕೊರೋನಾ ತಡೆಗಾಗಿ ಭಾರತದಲ್ಲಿ ಮಾರ್ಚ್ 24ರಿಂದ 21 ದಿನಗಳ ಅಂದರೆ ಏಪ್ರಿಲ್ 14ರವರೆಗೆ ಲಾಕ್ಡೌನ್ ಹೇರಲಾಗಿದೆ. ಲಾಕ್ಡೌನ್ ಮುಗಿಯುವುದಕ್ಕೆ ಉಳಿದಿರುವುದು ಆರೇ ದಿನ. ದೇಶಾದ್ಯಂತ ಲಾಕ್ಡೌನ್ ಮುಂದುವರಿಕೆ ಆಗುವುದು ಬಹುತೇಕ ಖಚಿತವಾಗಿದೆ.
ಆದರೆ ಪ್ರಶ್ನೆ ಉದ್ಭವ ಆಗಿರುವುದು ಎಷ್ಟು ದಿನ ಲಾಕ್ಡೌನ್ ಮುಂದುವರಿಸಬೇಕು ಮತ್ತು ಮತ್ತೊಮ್ಮೆ ಲಾಕ್ಡೌನ್ನ್ನು ಹೇಗೆ ಜಾರಿಗೊಳಿಸಬೇಕು ಎನ್ನುವುದರ ಬಗ್ಗೆ.
ಕೊರೋನಾ ಸಂಬಂಧ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ನೇತೃತ್ವದಲ್ಲಿ ರಚಿಸಲಾಗಿರುವ ಸಚಿವರ ಉನ್ನತ ಮಟ್ಟದ ತಂಡ ಮಂಗಳವಾರ ಸಭೆ ನಡೆಸಿತ್ತು. ಲಾಕ್ಡೌನ್ ವಿಸ್ತರಿಸುವಂತೆ ಸಚಿವರ ತಂಡ ಸರ್ಕಾರಕ್ಕೆ ಸಲಹೆ ನೀಡಿದೆ.
ಶಾಲಾ-ಕಾಲೇಜು ಸೇರಿದಂತೆ ಎಲ್ಲಾ ರೀತಿಯ ಶಿಕ್ಷಣ ಸಂಸ್ಥೆಗಳು ಮತ್ತು ದೇವಸ್ಥಾನ, ಮಸೀದಿ, ಚರ್ಚ್ಗಳು ಒಳಗೊಂಡಂತೆ ಎಲ್ಲ ರೀತಿಯ ಪ್ರಾರ್ಥನಾ ಮಂದಿರಗಳನ್ನು ಮೇ 15ರವರೆಗೆ ಅಂದರೆ ಲಾಕ್ಡೌನ್ ಮುಗಿದ ಬಳಿಕವೂ ಮತ್ತೆ ಒಂದು ತಿಂಗಳವರೆಗೆ ಮುಚ್ಚುವಂತೆ ಸಲಹೆ ನೀಡಿದೆ.
[…] […]