ಇನ್ನು ಮುಂದೆ ದಾನ ಸ್ವೀಕರಿಸಲ್ಲ-ನಟ ಉಪೇಂದ್ರ

ಕೊರೋನಾ ಸಂಕಷ್ಟದಲ್ಲಿ ನಟ ಉಪೇಂದ್ರ ತಮ್ಮ ಉಪ್ಪಿ ಪೌಂಡೇಶನ್ ಮೂಲಕ ಚಿತ್ರರಂಗದ ಕಲಾವಿದರು, ತಂತ್ರಜ್ಱರಿಗೆ ನೆರವಾಗಿದ್ದರು. ನಟ ಉಪೇಂದ್ರ ಅವರು ಇದೀಗ ಯಾವುದೇ ದಾನವನ್ನು ಇನ್ನ ಮುಂದೆ ಉಪ್ಪಿ ಪೌಂಡೇಶನ್ ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ನಟ ಉಪೇಂದ್ರ ಅವರ ಕಾರ್ಯಕ್ಕೆ ಹಲವಾರು ಜನ ಸಹಾಯ ಮಾಡಿದ್ದರು. ಹಾಗೂ ನಟ ಉಪೇಂದ್ರ ಅವರ ಬೆನ್ನಿಗೆ ನಿಂತಿದ್ದರು. ಕೆಲವು ಜನ ರೈತರೂ ಸಹ ತಾವು ಬೆಳೆದ ಬೆಳೆಯನ್ನು ಉಪ್ಪಿ ಫೌಂಡೇಶನ್​ಗೆ ಕನಿಷ್ಠ ಬೆಲೆಯಲ್ಲಿ ನೀಡಿದ್ದರು. ಇನ್ನು ಮುಂದೆ ಈತರದ ಯಾವುದೇ ದಾನವನ್ನು ಸ್ವೀಕರಿಸುವದಿಲ್ಲ ಎಂದು ಉಪೇಂದ್ರ ಅವರು ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ನಟ ಉಪೇಂದ್ರ, ಇಲ್ಲಿಯವರೆಗೂ ನಾವು ಯಾರನ್ನೂ ಏನೂ ಕೇಳದಿದ್ದರೂ ತುಂಬಾ ಹೃದಯವಂತರು ನಮ್ಮ ಮೂಲಕ ವಿತರಣೆಯಾಗಲೆಂದು ದಿನಸಿ ಹಣ್ಣು, ತರಕಾರಿ ಹೀಗೆ ಮುಂತಾದವುಗಳನ್ನು ಕೊಟ್ಟಿದ್ದಾರೆ. ನಮ್ಮ ಉಪ್ಪಿ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್‌ಗೆ ಧನ ಸಹಾಯವನ್ನೂ ಮಾಡಿದ್ದಾರೆ. ಅವುಗಳೆಲ್ಲವನ್ನೂ ಸೂಕ್ತವಾಗಿ ಬೇರೆ ಬೇರೆ ಕಡೆ ಸಂಕಷ್ಟದಲ್ಲಿರುವವರಿಗೆ ವಿತರಿಸಲಾಗಿದೆ, ಇನ್ನೂ ವಿತರಿಸಲಾಗುತ್ತದೆ ಸಹೃದಯತೆ ಮೆರೆದಂತಹ ತಮ್ಮೆಲ್ಲರಿಗೂ ಅನಂತಾನಂತ ಧನ್ಯವಾದಗಳು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here